ನವದೆಹಲಿ: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ದಂಪತಿಯು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಎಂದು ಆಕೆಯ ತಂದೆ ಇಮ್ರಾನ್ ಮಿರ್ಜಾ ತಿಳಿಸಿದ್ದಾರೆ.
‘ಹೌದು. ಸಾನಿಯಾ ಗರ್ಭಿಣಿಯಾಗಿದ್ದಾರೆ. ಅವರಿಗೆ ಅಕ್ಟೋಬರ್‌ನಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ’ ಎಂದು ಇಮ್ರಾನ್ ಅವರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಶೋಯಬ್ ಅವರು ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪಣಜಿಯಲ್ಲಿ ನಡೆದ ‘ಗೋವಾ ಉತ್ಸವ 2018’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಾನಿಯಾ ಅವರು ‘ಭವಿಷ್ಯದಲ್ಲಿ ಜನಿಸುವ ನಮ್ಮ ಮಗುವಿಗೆ ಮಿರ್ಜಾ ಮಲಿಕ್ ಎಂದು ನಾಮಕರಣ ಮಾಡಲಿದ್ದೇವೆ. ನನ್ನ ಮತ್ತು ಶೋಯಬ್ ಕುಟುಂಬದ ಹೆಸರುಗಳನ್ನು ಜೋಡಿಸಿ ಮಗುವಿಗೆ ನಾಮಕರಣ ಮಾಡುವ ಬಗ್ಗೆ ಚರ್ಚಿಸಿ ನಿರ್ಧರಿಸಿದ್ದೇವೆ. ಗಂಡು ಮಗು, ಹೆಣ್ಣುಮಗು ಯಾವುದೇ ಆಗಲಿ ಅದೇ ಹೆಸರು ಇಡುತ್ತೇವೆ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.