ADVERTISEMENT

ರಣಜಿ: ಪ್ರಿ ಕ್ವಾರ್ಟರ್‌ ಹಂತಕ್ಕೆ ಬಿಸಿಸಿಐ ಚಿಂತನೆ

ವಿಜಯ್ ಹಜಾರೆ ಟ್ರೋಫಿ ಟೂರ್ನಿಯೊಂದಿಗೆ ದೇಶಿ ಋತು ಆರಂಭಿಸಲು ಬಿಸಿಸಿಐ ಯೋಜನೆ

ಪಿಟಿಐ
Published 16 ಏಪ್ರಿಲ್ 2018, 19:40 IST
Last Updated 16 ಏಪ್ರಿಲ್ 2018, 19:40 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ ಹಂತವನ್ನು ಆರಂಭಿಸಲು ಮತ್ತು ವಿಜಯ್ ಹಜಾರೆ ಟೂರ್ನಿಯೊಂದಿಗೆ ದೇಶಿ ಕ್ರಿಕೆಟ್ ಋತುವಿಗೆ ಚಾಲನೆ ನೀಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತನೆ ನಡೆಸಿದೆ.

ಕೋಲ್ಕತ್ತದಲ್ಲಿ ಸೋಮವಾರ ಸಭೆ ಸೇರಿದ್ದ ಬಿಸಿಸಿಐ ತಾಂತ್ರಿಕ ಸಮಿತಿಯು ಸುದೀರ್ಘ ಚರ್ಚೆಯ ನಂತರ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ರಣಜಿ ಪಂದ್ಯಗಳಲ್ಲಿ ಈಗಿನ ಎಸ್‌.ಜಿ ಟೆಸ್ಟ್ ಚೆಂಡಿನ ಬದಲು ಕೂಕುಬರಾ ಚೆಂಡನ್ನು ಬಳಸುವ ಕುರಿತು ಕೂಡ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದರು.

‘ಮುಂಬೈನಲ್ಲಿ ಇತ್ತೀಚೆಗೆ ನಡೆದಿದ್ದ ನಾಯಕರು ಮತ್ತು ಕೋಚ್‌ಗಳ ಸಮಾವೇಶದ‌ಲ್ಲಿ ಹೆಚ್ಚಿನ ತಂಡಗಳ ನಾಯಕರು ಪ್ರಿ ಕ್ವಾರ್ಟರ್ ಹಂತದ ಪಂದ್ಯಗಳು ಬೇಕು ಎಂಬ ಬೇಡಿಕೆ ಇರಿಸಿದ್ದರು. ಇದನ್ನು ಪರಿಗಣಿಸಲು ನಿರ್ಧರಿಸಲಾಗಿದೆ. ಮಹಿಳೆಯರ ಏಕದಿನ ಮತ್ತು ಟ್ವೆಂಟಿ –20
ಟೂರ್ನಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದಕ್ಕೂ ನಿರ್ಧರಿಸಲಾಗಿದ’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.