ADVERTISEMENT

ರಾಜ್ಯದ ಮೊದಲ ಎದುರಾಳಿ ಗುಜರಾತ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:05 IST
Last Updated 7 ಮಾರ್ಚ್ 2014, 19:05 IST

ನವದೆಹಲಿ (ಪಿಟಿಐ): ರಣಜಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌್ ಫೈನಲ್‌ನ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್‌ ಎದುರು ಪೈಪೋಟಿ ನಡೆಸಲಿದೆ.

ಕೋಲ್ಕತ್ತದಲ್ಲಿ ಮಾರ್ಚ್‌ 11ರಿಂದ 18ರ ವರೆಗೆ ಟೂರ್ನಿ ನಡೆಯಲಿದೆ. ಕರ್ನಾಟಕದ ಪಂದ್ಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜನೆ ಯಾಗಿದೆ.

ಇರಾನಿ ಕಪ್‌ನಲ್ಲೂ ಪ್ರಶಸ್ತಿ ಗೆದ್ದಿರುವ ಕರ್ನಾಟಕ ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಗಳಿಸಿದೆ. ಜೊತೆಗೆ ಗುಜರಾತ್‌, ಬಂಗಾಳ ಮತ್ತು ತಮಿಳುನಾಡು ತಂಡಗಳೂ ಅರ್ಹತೆ ಗಿಟ್ಟಿಸಿವೆ. ಮಾರ್ಚ್‌್ 10ರಂದು ಎರಡು ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿದ್ದು, ರೈಲ್ವೇಸ್‌–ಬರೋಡ (ಈಡನ್‌ ಗಾರ್ಡನ್ಸ್‌) ಮತ್ತು ಸರ್ವಿಸಸ್‌್–ವಿದರ್ಭ ತಂಡಗಳು (ಜಾಧವ್‌ಪುರ ವಿ.ವಿ.) ಮುಖಾಮುಖಿ ಯಾಗಲಿವೆ.

ರೈಲ್ವೇಸ್‌ ಹಾಗೂ ಬರೋಡ ತಂಡಗಳ ನಡುವಿನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಗೆಲುವು ಸಾಧಿಸುವ ತಂಡ ಪಂಜಾಬ್‌ ಮೇಲೂ, ಸರ್ವಿಸಸ್‌ ಮತ್ತು ವಿದರ್ಭ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ತಂಡ ಜಾರ್ಖಂಡ್‌್ ವಿರುದ್ಧವೂ ಕ್ವಾರ್ಟರ್‌ ಫೈನಲ್‌ ಆಡಲಿವೆ. ಎಲ್ಲಾ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿವೆ.

ಕರ್ನಾಟಕ ತಂಡಕ್ಕೆ ವಿನಯ್‌ ಸಾರಥ್ಯ
ಬೆಂಗಳೂರು
: ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ನಾಕೌಟ್‌ ಹಂತದ ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ ವಿನಯ್‌ ಕುಮಾರ್‌ ನಾಯಕರಾಗಿ ಮುಂದುವರಿದಿದ್ದಾರೆ.

ವಿನಯ್‌ ಬಳಗ ಸುಬ್ಬಯ್ಯ ಪಿಳ್ಳೈ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿತ್ತು. ಒಂದು ಪಂದ್ಯ ಡ್ರಾ ಆಗಿದ್ದರೆ, ಕೊನೆಯ ಪಂದ್ಯದಲ್ಲಿ ತಮಿಳುನಾಡು ಎದುರು ನಿರಾಸೆ ಅನುಭವಿಸಿತ್ತು.

ತಂಡ: ವಿನಯ್‌ ಕುಮಾರ್‌ (ನಾಯಕ), ರಾಬಿನ್‌ ಉತ್ತಪ್ಪ, ಕೆ.ಎಲ್‌. ರಾಹುಲ್‌, ಗಣೇಶ್ ಸತೀಶ್‌, ಮನೀಷ್‌ ಪಾಂಡೆ, ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ಎಚ್‌.ಎಸ್‌. ಶರತ್‌, ಮಯಂಕ್‌ ಅಗರವಾಲ್‌, ಎಸ್‌. ಅರವಿಂದ್‌, ರೋನಿತ್‌ ಮೋರೆ, ಅಬ್ರಾರ್‌ ಖಾಜಿ, ಅಮಿತ್‌ ವರ್ಮ ಮತ್ತು ಕುನಾಲ್‌ ಕಪೂರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.