ADVERTISEMENT

ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾರಂಭ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:30 IST
Last Updated 10 ಏಪ್ರಿಲ್ 2011, 19:30 IST
ರಾಯಲ್ ಚಾಲೆಂಜರ್ಸ್ ಬೆಂಗಳೂರು  ಶುಭಾರಂಭ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾರಂಭ   

ಕೊಚ್ಚಿ: ಎಬಿ ಡಿವಿಲಿಯರ್ಸ್ ಅಬ್ಬರಕ್ಕೆ ಕೊಚ್ಚಿ ಟಸ್ಕರ್ಸ್ ಕೇರಳ ತಂಡ ತಬ್ಬಿಬ್ಬಾಯಿತು. ಅಜೇಯ ಅರ್ಧಶತಕ (54, 40 ಎಸೆತ, 1ಬೌಂ, 5 ಸಿಕ್ಸರ್) ಸಿಡಿಸಿದ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ರೂವಾರಿ ಎನಿಸಿದರು. ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಡೇನಿಯಲ್ ವೆಟೋರಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ ಆರು ವಿಕೆಟ್‌ಗಳಿಂದ ಕೊಚ್ಚಿ ತಂಡವನ್ನು ಮಣಿಸಿತು.

ಮಾಹೇಲ ಜಯವರ್ಧನೆ ನೇತೃತ್ವದ ಕೊಚ್ಚಿ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 161 ರನ್ ಪೇರಿಸಿದರೆ, ಬೆಂಗಳೂರು ತಂಡ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 162 ರನ್ ಗಳಿಸಿ ಜಯ ಸಾಧಿಸಿತು. ಸವಾಲಿನ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ತಂಡ ತಿಲಕರತ್ನೆ ದಿಲ್ಶಾನ್ (1) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಯುವ ಪ್ರತಿಭೆ ಮಯಾಂಕ್ ಅಗರ್‌ವಾಲ್ (33, 24 ಎಸೆತ, 2 ಬೌಂ. 2 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ (23) ತಂಡಕ್ಕೆ ಆಸರೆಯಾದರು.

10 ಓವರ್‌ಗಳು ಕೊನೆಗೊಂಡಾಗ ಚಾಲೆಂಜರ್ಸ್ 3 ವಿಕೆಟ್‌ಗೆ 85 ರನ್ ಗಳಿಸಿತ್ತು. ಬಳಿಕ ಸೌರಭ್ ತಿವಾರಿ (24 ಎಸೆತಗಳಲ್ಲಿ 26) ಅವರು ವಿಲಿಯರ್ಸ್‌ಗೆ ಉತ್ತಮ ಸಾಥ್ ನೀಡಿದರು. ರೈಫಿ ಗೊಮೆಜ್ ಎಸೆದ 18ನೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದ ವಿಲಿಯರ್ಸ್ ಪಂದ್ಯಕ್ಕೆ ತಿರುವು ನೀಡಿದರು.  ಕೊನೆಯಲ್ಲಿ ಅಸದ್ ಖಾನ್ ಪಠಾಣ್ 4 ಎಸೆತಗಳಲ್ಲಿ 12 ರನ್ ಗಳಿಸಿ ಬೆಂಗಳೂರು ತಂಡದ ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು.

ಸ್ಕೋರ್  ವಿವರ
ಕೊಚ್ಚಿ ಟಸ್ಕರ್ಸ್ ಕೇರಳ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 161
ರಾಯಲ್ ಚಾಲೆಂಜರ್ಸ್ ಬೆಂಗಳೂರು: 18.4 ಓವರ್‌ಗಳಲ್ಲಿ
4 ವಿಕೆಟ್‌ಗೆ 162
ಮಯಾಂಕ್ ಅಗರ್‌ವಾಲ್ ಸಿ ವಿನಯ್ ಬಿ ರವೀಂದ್ರ ಜಡೇಜ  33
ತಿಲಕರತ್ನೆ ದಿಲ್ಶಾನ್ ಸಿ ಮೆಕ್ಲಮ್ ಬಿ ಎಸ್. ಶ್ರೀಶಾಂತ್  01
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ವಿನಯ್ ಕುಮಾರ್  23
ಎಬಿ ಡಿವಿಲಿಯರ್ಸ್ ಔಟಾಗದೆ  54
ಸೌರಭ್ ತಿವಾರಿ ಸಿ ಜಯವರ್ಧನೆ ಬಿ ರೈಫಿ ಗೊಮೆಜ್  26
ಅಸಾದ್ ಖಾನ್ ಪಠಾಣ್ ಔಟಾಗದೆ  12
ಇತರೆ: (ಲೆಗ್ ಬೈ-4, ವೈಡ್-7, ನೋಬಾಲ್-2)  13
ವಿಕೆಟ್ ಪತನ: 1-7 (ದಿಲ್ಶಾನ್), 2-48 (ಕೊಹ್ಲಿ), 3-85 (ಅಗರ್‌ವಾಲ್), 4-137 (ತಿವಾರಿ)
ಬೌಲಿಂಗ್: ಆರ್‌ಪಿ ಸಿಂಗ್ 3-0-29-0, ಎಸ್. ಶ್ರೀಶಾಂತ್ 3-0-28-1, ರವೀಂದ್ರ ಜಡೇಜ 4-0-28-1, ಆರ್. ವಿನಯ್ ಕುಮಾರ್ 3.4-0-26-1, ಮುತ್ತಯ್ಯ ಮುರಳೀಧರನ್ 4-0-27-0, ರೈಫಿ ಗೊಮೆಜ್ 1-0-20-1
ಫಲಿತಾಂಶ: ರಾಯಲ್ ಚಾಲೆಂಜರ್ಸ್‌ಗೆ 6 ವಿಕೆಟ್ ಜಯ ಹಾಗೂ ಎರಡು ಪಾಯಿಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.