ADVERTISEMENT

ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ;ಕರ್ನಾಟಕ ಮಡಿಲಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: ಕರ್ನಾಟಕ ತಂಡದವರು ಇಲ್ಲಿ ಕೊನೆಗೊಂಡ 23ನೇ ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು. ಇದರಿಂದ ಸ್ಥಳೀಯ ಅಭಿಮಾನಿಗಳ ಎದುರು ಸಂಭ್ರಮಿಸುವ ಅವಕಾಶವೂ ಆತಿಥೇಯರ ಪಾಲಾಯಿತು.

ನಗರದ ಹೊಂಬೇಗೌಡ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ 10-9ಪಾಯಿಂಟ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು.

ಆರಂಭದಿಂದಲೂ ಸಾಕಷ್ಟು ಕುತೂಹಲಕ್ಕೆ ಈ ಪಂದ್ಯ ಕಾರಣವಾಗಿತ್ತು. ಕೊನೆಗೆ ವಿಜಯದ ವೇದಿಕೆ ಮೇಲೆ ಸಂಭ್ರಮಿಸುವ ಅವಕಾಶ ಲಭಿಸಿದ್ದು ಕರ್ನಾಟಕಕ್ಕೆ. ಇದೇ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ನಡೆದ `ಪ್ಲೇ ಆಫ್~ ಪಂದ್ಯದಲ್ಲಿ ಪಶ್ಚಿಮ ಬಂಗಾಳ 15-14ರಲ್ಲಿ ಕೇರಳ ಎದುರು ಜಯಿಸಿತು.

ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ ಮಹಾರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡಿತು. ಈ ತಂಡ ಅಂತಿಮ ಘಟ್ಟದ ಪಂದ್ಯದಲ್ಲಿ 10-7ರಲ್ಲಿ ಪಶ್ವಿಮ ಬಂಗಾಳವನ್ನು ಸೋಲಿಸಿತು. ದೆಹಲಿ ತಂಡ 15-5ರಲ್ಲಿ ಕರ್ನಾಟಕ ಬಾಲಕಿಯರ ತಂಡವನ್ನು ಸೋಲಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ಫೆಡರೇಷನ್ ಕಪ್ ಫುಟ್‌ಬಾಲ್‌ನ ಪುರುಷರ ವಿಭಾಗದ ಫೈನಲ್‌ನಲ್ಲಿ ಮಹಾರಾಷ್ಟ್ರ 14-12ರಲ್ಲಿ ಕೊಲ್ಲಾಪುರದ ಮೇಲೂ, ಮಹಿಳಾ ವಿಭಾಗದಲ್ಲಿ ಕೇರಳ 11-9ರಲ್ಲಿ ಕರ್ನಾಟಕದ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.