ಬೆಂಗಳೂರು: ಬಿ.ರಾಹುಲ್ ಹಾಗೂ ಭಾವನಾ ಅಶ್ವಿನಿ ಅವರು ನಗರದಲ್ಲಿ ನಡೆದ `ಓಪನ್ 10ಕೆ' ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಕ್ರಮವಾಗಿ ವಿಜಯಶಾಲಿ ಎನಿಸಿದರು.
ಇಲ್ಲಿನ `ಇಂಟರ್ ನ್ಯಾಶನಲ್ ಇನ್‌ಸ್ಟಿಟ್ಯುಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ(ಐಐಐಟಿ) `ಲೈಫ್ ಇಸ್ ಕಾಲಿಂಗ್- ಸ್ಪೋರ್ಟ್ಸ್ ಅಂಡ್ ಎಲೆಕ್ಟ್ರಾನಿಕ್ಸ್‌ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ (ಇಎಲ್‌ಸಿಐಎ)' ಈ ಓಟವನ್ನು ಆಯೋಜಿಸಿತ್ತು.
ಭಾನುವಾರ ಮುಂಜಾವಿನಲ್ಲಿ ನಡೆದ ಸ್ಪರ್ಧೆಯಲ್ಲಿ ರಾಹುಲ್ 39.09 ನಿಮಿಷಗಳಲ್ಲಿ ನಿಗದಿತ ಗುರಿ ತಲುಪಿ ಪುರುಷರ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು.
ಮಹಿಳೆಯ ವಿಭಾಗದಲ್ಲಿ ಭಾವನಾ ಅಶ್ವಿನಿ ಅವರು 52.02 ನಿಮಿಷಗಳಲ್ಲಿ ದಡ ತಲುಪುವ ಮೂಲಕ ಜಯದ ನಗೆ ಬೀರಿದರು.
ಚೆನ್ನೈನಲ್ಲಿ ನಡೆಯುತ್ತಿರುವ `ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ಸ್ ಟೂರ್ನಿ'ಯಲ್ಲಿ ಪಾಲ್ಗೊಂಡಿದ್ದ ರಾಹುಲ್, ಶನಿವಾರವಷ್ಟೇ ನಗರಕ್ಕೆ ವಾಪಸ್ಸಾಗಿದ್ದರು.
`ನಾನು ಸಾಧಾರಣವಾದ ವೇಗದೊಂದಿಗೆ ಕ್ರಮಿಸಿದೆ. ಅಭ್ಯಾಸದ ವೇಳೆ ಓಡುವ ಹಾಗೆಯೇ ಓಡಿದೆ' ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.