ADVERTISEMENT

ರಿಭವ್‌ ಜಯದ ಓಟ

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 19:30 IST
Last Updated 26 ಜನವರಿ 2016, 19:30 IST
ರಿಭವ್‌ ಜಯದ ಓಟ
ರಿಭವ್‌ ಜಯದ ಓಟ   

ಕಲಬುರ್ಗಿ:  ಕರ್ನಾಟಕದ ಆರ್‌. ರಿಭವ್‌, ಗೌತಮ್‌ ರಾಮ್‌ಕುಮಾರ್ ಹಾಗೂ ಎಲ್‌. ಹರ್ಷ ಅವರು ಇಲ್ಲಿ ನಡೆಯುತ್ತಿರುವ ‘ಝೆಸ್ಟ್ ಕ್ಲಬ್ ಓಪನ್ 2016 ಎಐಟಿಎ ಪುರುಷರ 50ಕೆ’ ರ್‍ಯಾಂಕಿಂಗ್ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ರಿಭವ್‌ 7–6, 6–1ರ ನೇರ ಸೆಟ್‌ಗಳಿಂದ ರಾಜ್ಯದವರೇ ಆದ ಎ. ಪ್ರಸನ್ನ ಎದುರು ಜಯ ಪಡೆದರು. ರಾಜ್ಯದ ಮತ್ತೊಬ್ಬ ಆಟಗಾರ ಗೌತಮ್‌ ರಾಮ್‌ಕುಮಾರ್‌ 6–0,         6–3ರಲ್ಲಿ ಶೇನ್‌ ಬಿದ್ದಯ್ಯ ಅವರನ್ನು ಮಣಿಸಿದರು.  ಎಲ್‌. ಹರ್ಷ 6–1,       6–2ರಲ್ಲಿ ಸಚಿತ್‌ ಟುಲ್ಸಾನಿ ವಿರುದ್ಧ ಸುಲಭ ಜಯ ಗಳಿಸಿದರು.

ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ  ಶೇಖ್‌ ಒಸಾಮ (ಆಂಧ್ರ) 5–7,7–5,6–0ರಲ್ಲಿ ಸಿದ್ಧಾರ್ಥ ಪೊನ್ನಾಲ (ತೆಲಂಗಾಣ) ವಿರುದ್ಧ, ನಿತಿನ್‌ ಗುಂಡುಬೋಯ್ನಾ (ತೆಲಂಗಾಣ)6–2,2–6,6–4ರಲ್ಲಿ ನಾಸೀರ್‌ ಜೆವೂರ್‌ ವಿರುದ್ಧ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.
ರಸ್ವಂತ್‌ ರವಿ (ತಮಿಳುನಾಡು) 6–2,6–2ರಲ್ಲಿ ಪ್ರಣವ್‌ ಕಾರ್ತಿಕ್‌ ವಿರುದ್ಧ, ಫಯಾಜ್‌ ಹುಸೇನ್‌ 6–3,6–4ರಲ್ಲಿ ಶಾಂತಕುಮಾರ್‌ (ಕರ್ನಾಟಕ) ವಿರುದ್ಧ, ರೋಹನ್‌ ಭಾಟಿಯಾ (ಮಹಾರಾಷ್ಟ್ರ) 6–3,6–2 ರಲ್ಲಿ ಶೇಖರ್‌ ಜೈಸ್ವಾಲ್‌ ವಿರುದ್ಧ ಗೆಲುವು ಪಡೆದರು.

ಡಬಲ್ಸ್‌ ವಿಭಾಗದ ಪಂದ್ಯಗಳಲ್ಲಿ ರೋಹನ್‌ ಭಾಟಿಯಾ ಮತ್ತು ಶೇಖ್‌ ಒಸಾಮ ಜೋಡಿ 6–2,6–2ರಲ್ಲಿ ಚಿರಾಜ್ನ ಸಾಹು ಮತ್ತು ಸಚಿತ್‌ ಟುಲ್ಸಾನಿ ಜೋಡಿ ವಿರುದ್ಧ ಗೆದ್ದು ಸೆಮಿಫೈನಲ್‌ ತಲುಪಿದರು. ಆರ್‌. ರಿಭವ್‌ ಮತ್ತು ಗೌತಮ್‌ ರಾಮ್‌ಕುಮಾರ್‌ 6–0,6–0ರಲ್ಲಿ ಅಶುತೋಷ್‌ ದಾಸ್ ಮತ್ತು ಪಿ.ಸಂದೀಪ್‌ ಜೋಡಿ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದ್ದಾರೆ.

ರೋಹಿತ್‌ ಮತ್ತು ಜಿ. ನಿತಿನ್‌ ಜೋಡಿ 6–4,6–7(5)ರಲ್ಲಿ ಅಲೋಕ್‌ ಆರಾಧ್ಯ ಮತ್ತು ನಾಸೀರ್‌ ಜೆವೂರ್‌ ವಿರುದ್ಧ  ಗೆಲುವು ಪಡೆದರು. ರಸ್ವಂತ್‌ ರವಿ ಮತ್ತು ಸಿದ್ದಾರ್ಥ ಜೋಡಿ 6–4,     6–1ರಲ್ಲಿ ಶಾಂತಕುಮಾರ್‌ ಮತ್ತು ಅಮರ್‌ ಜೋಡಿ ಎದುರು ಗೆದ್ದು ಸೆಮಿಫೈನಲ್‌ ಹಂತ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.