ADVERTISEMENT

ಲಾರ್ಗಟ್ `ಸಿಎಸ್‌ಎ' ಮುಖ್ಯಸ್ಥರಾಗಿ ನೇಮಕ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಜೋಹಾನ್ಸ್‌ಬರ್ಗ್ (ಪಿಟಿಐ): ಐಸಿಸಿಯ ಮಾಜಿ ಸಿಇಒ ಹರೂನ್ ಲಾರ್ಗಟ್ ಅವರನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾದ (ಸಿಇಒ) ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ವಿವಾದಕ್ಕೆ ಒಳಗಾಗಿದ್ದ ಗೆರಾಲ್ಡ್ ಮಜೋಲಾ ಅವರ ಸ್ಥಾನಕ್ಕೆ ಈ ನೇಮಕ ನಡೆದಿದೆ.

ಆದರೆ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಈ ನಡೆ ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಹಿಂದೆಯೇ ಅವರ ನೇಮಕಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಕಾರಣ ಲಾರ್ಗಟ್ ಅವರು ಐಸಿಸಿ ಮುಖ್ಯಸ್ಥರಾಗಿದ್ದಾಗ ಬಿಸಿಸಿಐ ವಿರೋಧ ಕಟ್ಟಿಕೊಂಡಿದ್ದರು.

ಸರಣಿಯಿಂದ ಹಿಂದಕ್ಕೆ: ವಿರೋಧದ ನಡುವೆಯೂ ಲಾರ್ಗಟ್ ಅವರನ್ನು `ಕ್ರಿಕೆಟ್ ದಕ್ಷಿಣ ಆಫ್ರಿಕಾ'ದ ಮುಖ್ಯಸ್ಥರನ್ನಾಗಿ ನೇಮಿಸಿರುವ ಕಾರಣ ಭಾರತ ತಂಡ ಮುಂಬರುವ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಕೆಲ ಸುದ್ದಿವಾಹಿನಿಗಳಲ್ಲಿ ವರದಿಯಾಗಿದೆ.
ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಆಡಲು ನವೆಂಬರ್‌ನಲ್ಲಿ ದೋನಿ ಬಳಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.