ADVERTISEMENT

ಲೋಧಾ ಶಿಫಾರಸುಗಳ ಬಗ್ಗೆ ವಿಶೇಷ ಸಮಿತಿ ಸಭೆಯಲ್ಲಿ ವಿರೋಧ

ಪಿಟಿಐ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಲೋಧಾ ಶಿಫಾರಸುಗಳ ಬಗ್ಗೆ ವಿಶೇಷ ಸಮಿತಿ ಸಭೆಯಲ್ಲಿ ವಿರೋಧ
ಲೋಧಾ ಶಿಫಾರಸುಗಳ ಬಗ್ಗೆ ವಿಶೇಷ ಸಮಿತಿ ಸಭೆಯಲ್ಲಿ ವಿರೋಧ   

ನವದೆಹಲಿ: 70 ವರ್ಷ ಮೀರಿದವರನ್ನು ಬಿಸಿಸಿಐ ಆಡಳಿತದಿಂದ ದೂರ ಇಡುವುದು, ಒಂದು ರಾಜ್ಯಕ್ಕೆ ಒಂದೇ ಮತದ ಹಕ್ಕು, ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಸಂಖ್ಯೆಯನ್ನು ಐದರಿಂದ ಮೂರಕ್ಕೆ ಇಳಿಸುವುದೂ ಸೇರಿದಂತೆ ಕೆಲ ಪ್ರಮುಖ ಲೋಧಾ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಕ್ಕೆ ಬಿಸಿಸಿಐ ವಿಶೇಷ ಸಮಿತಿ ಸಭೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಲೋಧಾ ಶಿಫಾರಸುಗಳನ್ನು ಶೀಘ್ರವಾಗಿ ಜಾರಿಗೆ ತರುವ ಸಲುವಾಗಿ ಬಿಸಿಸಿಐ ಇತ್ತೀಚೆಗೆ ರಾಜೀವ್‌ ಶುಕ್ಲಾ ಅವರ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚಿಸಿತ್ತು. ಏಳು ಸದಸ್ಯರ ಸಮಿತಿಯು ಶನಿವಾರ ಸಭೆ ಸೇರಿ ಚರ್ಚಿಸಿತು.

‘ಕ್ರಿಕೆಟ್‌ ಆಡಳಿತದಲ್ಲಿ ಒಂಬತ್ತು ವರ್ಷ ಇದ್ದವರು ಮತ್ತೆ ಪದಾಧಿಕಾರಿಯಾಗುವಂತಿಲ್ಲ ಎಂಬ ಶಿಫಾರಸಿನ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಸಮಿತಿಗೆ ವಿಶೇಷ ಆಹ್ವಾನಿತರಾಗಿ ನೇಮಕವಾಗಿರುವ ನಿರಂಜನ್‌ ಷಾ ಅವರು 70 ವರ್ಷ ಮೀರಿದವರನ್ನು ಬಿಸಿಸಿಐ ಆಡಳಿತದಿಂದ ದೂರ ಇಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು’ ಎಂದು ಸದಸ್ಯರೊಬ್ಬರು ಹೇಳಿದ್ದಾರೆ.

ADVERTISEMENT

‘ಲೋಧಾ ಸಮಿತಿಯ ಕೆಲ ಶಿಫಾರಸುಗಳನ್ನು ಜಾರಿಗೆ ತರಲು ತೊಡಕಾಗಿರುವ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಅಂಶಗಳನ್ನು ಆಡಳಿತಾಧಿ ಕಾರಿಗಳ ಸಮತಿಯ ಗಮನಕ್ಕೆ ತರುತ್ತೇವೆ. ಜುಲೈ 7ಕ್ಕೆ ಮತ್ತೊಂದು ಸಭೆ ನಡೆಸಲಾಗುತ್ತದೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.