ADVERTISEMENT

ವಿಶ್ವಕಪ್ ಜಯಿಸಿ ಒಂದು ವರ್ಷ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): ಆವತ್ತು ಏಪ್ರಿಲ್ ಎರಡು. ಭಾರತದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕಾಡಿದ್ದು ಒಂದೇ ಪ್ರಶ್ನೆ. ಭಾರತ ವಿಶ್ವಕಪ್ ಗೆಲ್ಲುತ್ತಾ...

ಕ್ರಿಕೆಟ್ ಪ್ರೇಮಿಗಳ ಈ ಪ್ರಶ್ನೆಗೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಆವತ್ತು ಭಾರತದ ಆಟಗಾರರು ತಕ್ಕ ಉತ್ತರ ಕೊಟ್ಟಿದ್ದರು. 28 ವರ್ಷಗಳ ಬಳಿಕ  ದೋನಿ ಪಡೆ `ವಿಶ್ವ ಚಾಂಪಿಯನ್~ ಕಿರೀಟವನ್ನು ಎತ್ತಿ ಹಿಡಿದಿತ್ತು. ಅಂದು ಇಡೀ ದೇಶವೇ ಸಂಭ್ರಮ, ಸಡಗರದ ಹೊಳೆಯಲ್ಲಿ ತೇಲಿತ್ತು. ಆ ಸಂಭ್ರಮಾಚರಣೆ ನಡೆದು ಈ ಸೋಮವಾರಕ್ಕೆ ಸರಿಯಾಗಿ ಒಂದು ವರ್ಷ ತುಂಬಿದಂತಾಯಿತು.

ಆದರೆ, ಆ ನೆನಪುಗಳು ಇಂದಿಗೂ ಹಸಿರಾಗಿವೆ. ಎದುರಾಳಿ ಶ್ರೀಲಂಕಾ ತಂಡವನ್ನು ಮಣಿಸಿ ಆರು ವಿಕೆಟ್‌ಗಳ ಗೆಲುವು ಪಡೆದಿತ್ತು `ಮಹಿ~ ಪಡೆ. ಈ ಒಂದು ವರ್ಷದ ಹಾದಿಯಲ್ಲಿ ಭಾರತ ತಂಡ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ.

ADVERTISEMENT

ಈ ಒಂದು ವರ್ಷದ ಅವಧಿಯಲ್ಲಿ ಸಚಿನ್ ಅವರ `ಶತಕಗಳ ಶತಕ~ದ ಮಹಾ ಸಾಧನೆ, ಡಂಕನ್ ಫ್ಲೆಚರ್ ಕೋಚ್ ಆಗಿ ನೇಮಕವಾಗಿದ್ದು ಹೀಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳಾದವು.

ವಿಶ್ವಕಪ್ ಜಯಿಸಿದ ನಂತರ ಭಾರತಕ್ಕೆ ಬಿಡುವಿಲ್ಲದ ವೇಳಾಪಟ್ಟಿ. ಇಂಗ್ಲೆಂಡ್ ವಿರುದ್ಧದ ಸರಣಿ ಸೋಲು, ಆಸ್ಟ್ರೇಲಿಯಾದಲ್ಲಿ ಮುಖಭಂಗ, ಏಷ್ಯಾಕಪ್‌ನಲ್ಲಿ ನಿರಾಸೆ ಹೀಗೆ ಹಲವು ಸೋಲುಗಳು ತಂಡವನ್ನು ಕಾಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.