ಕರಾಚಿ (ಪಿಟಿಐ): ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕಿ ತೊಳಲಾಡಿರುವ ಪಾಕಿಸ್ತಾನ ತಂಡದವರು ಈ ಬಾರಿಯ ವಿಶ್ವಕಪ್ ಕ್ರಿಕೆಟ್‌ನಲ್ಲಿ ಯಾವುದೇ ರೀತಿಯಲ್ಲಿ ಬಿರುಗಾಳಿ ಏಳುವಂತೆ ಮಾಡಿಲ್ಲ. ಆಟದಲ್ಲಿ ಮಾತ್ರ ತಮ್ಮ ಸತ್ವ ಪ್ರದರ್ಶಿಸುತ್ತಾ ಸಾಗಿದ್ದಾರೆ.
‘ಸ್ಪಾಟ್ ಫಿಕ್ಸಿಂಗ್’ನಂಥ ಪ್ರಕರಣದಲ್ಲಿ ವಿಶ್ವದ ಕಣ್ಣು ಕುಕ್ಕಿದ ತಂಡವು ‘ಈಗ ವಿವಾದಗಳಿಂದ ಮುಕ್ತ’ ಎಂದು ಹೇಳುತ್ತಾರೆ ಕೋಚ್ ವಕಾರ್ ಯೂನಿಸ್. ಕೋಚ್ ಸ್ಥಾನಕ್ಕೆ ಬಂದು ಒಂದು ವರ್ಷವನ್ನು ಪೂರೈಸಿರುವ ಅವರು ಪಾಕ್ ಪಡೆಯು ಈ ಬಾರಿಯ ವಿಶ್ವಕಪ್‌ನಲ್ಲಿ ಯಾವುದೇ ಆಘಾತಕ್ಕೆ ಅವಕಾಶ ಸಿಗದ ರೀತಿಯಲ್ಲಿ ಉತ್ತಮ ಪ್ರದರ್ಶನದ ಹಾದಿಯಲ್ಲಿ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
‘ದೊಡ್ಡ ಸಮಾಧಾನ. ಹೌದು; ತಂಡದ ಪ್ರತಿಯೊಬ್ಬ ಆಟಗಾರ ಆತ್ಮವಿಶ್ವಾಸದಿಂದ ಗಟ್ಟಿಗೊಂಡಿದ್ದಾನೆ. ಹೀಗೆ ಗೆಲುವು ಪಡೆಯುತ್ತಾ ಸಾಗಿರುವುದೇ ಅದಕ್ಕೆ ಸಾಕ್ಷಿ. ವಿವಾದಗಳ ಸುಳಿಯಿಂದ ಹೊರಬಂದು ಕೇವಲ ಕ್ರಿಕೆಟ್ ಕಡೆಗೆ ಗಮನ ಇರುವ ಕಾರಣ ಪ್ರದರ್ಶನ ಮಟ್ಟವೂ ಸುಧಾರಿಸಿದೆ. ಕೋಚ್ ಆಗಿ ತಂಡದಲ್ಲಿನ ಈ ಬೆಳವಣಿಗೆ ಹಿತಕಾರಿ ಎನಿಸಿದೆ’ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮತ್ತೆ ನಮ್ಮ ತಂಡವನ್ನು ಯಾವುದಾದರೂ ವಿವಾದದ ನಡುವೆ ಎಳೆಯಲಾಗುತ್ತದೆ ಎನ್ನುವ ಆತಂಕ ತಪ್ಪಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.