ADVERTISEMENT

ವಿಶ್ವ ದಾಖಲೆ ಬರೆದ ನ್ಯೂಜಿಲೆಂಡ್ ಮಹಿಳೆಯರು

ಏಜೆನ್ಸೀಸ್
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಬೇಟ್ಸ್‌
ಬೇಟ್ಸ್‌   

ಡುಬ್ಲಿನ್‌: ನಾಯಕಿ, ಆರಂಭಿಕ ಆಟಗಾರ್ತಿ ಸೂಜಿ ಬೇಟ್ಸ್‌ (151; 94 ಎ, 2 ಸಿ, 24 ಬೌಂ) ಮತ್ತು ಮೂರನೇ ಕ್ರಮಾಂಕದ ಮ್ಯಾಡಿ ಗ್ರೀನ್‌ (121; 77 ಎ, 1 ಸಿ, 15 ಬೌಂ) ಅವರ ಬಲದಿಂದ ನ್ಯೂಜಿಲೆಂಡ್ ತಂಡ ಏಕದಿನ ಕ್ರಿಕೆಟ್‌ನಲ್ಲಿ ಶುಕ್ರವಾರ ದಾಖಲೆ ಬರೆಯಿತು. ಐರ್ಲೆಂಡ್ ವಿರುದ್ಧ ಇಲ್ಲಿ ನಡೆದ ಮಹಿಳೆಯರ ಏಕದಿನ ಪಂದ್ಯದಲ್ಲಿ 490 ರನ್‌ ಕಲೆ ಹಾಕಿದ ಈ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ಸಾಧನೆ ಮಾಡಿತು. ಪಂದ್ಯದಲ್ಲಿ ಐರ್ಲೆಂಡ್‌ 346 ರನ್‌ಗಳಿಂದ ಸೋತಿತು.

ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ 2016ರಲ್ಲಿ ದಾಖಲಾಗಿತ್ತು. ನಾಟಿಂಗ್‌ಹ್ಯಾಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ ಮೂರು ವಿಕೆಟ್‌ಗಳಿಗೆ 444 ರನ್‌ ಗಳಿಸಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಹಿಂದಿನ ಗರಿಷ್ಠ ಮೊತ್ತ 1997ರಲ್ಲಿ ದಾಖಲಾಗಿತ್ತು. ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌ ಐದು ವಿಕೆಟ್‌ಗಳಿಗೆ 455 ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 4ಕ್ಕೆ 490 (ಸೂಜಿ ಬೇಟ್ಸ್‌ 151, ವಾಟ್ಕಿನ್‌ 62, ಗ್ರೀನ್‌ 121, ಎಸಿ ಕೇರ್‌ 81); ಐರ್ಲೆಂಡ್‌: 35.3 ಓವರ್‌ಗಳಲ್ಲಿ 144ಕ್ಕೆ ಆಲೌಟ್‌ (ಡೆಲಾನಿ 37, ಗ್ರೇ 35; ರೋವ್‌ 23ಕ್ಕೆ2, ಕಸ್ಪರೆಕ್‌ 17ಕ್ಕೆ4).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.