ADVERTISEMENT

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದ ಸುಂದರ್‌ ಸಿಂಗ್‌ ಗುರ್ಜಾರ್‌

ಪಿಟಿಐ
Published 15 ಜುಲೈ 2017, 19:35 IST
Last Updated 15 ಜುಲೈ 2017, 19:35 IST
ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದ ಸುಂದರ್‌ ಸಿಂಗ್‌ ಗುರ್ಜಾರ್‌
ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದ ಸುಂದರ್‌ ಸಿಂಗ್‌ ಗುರ್ಜಾರ್‌   

ಲಂಡನ್‌: ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಜಾವಲಿನ್‌ ಥ್ರೋ ಕ್ರೀಡಾಪಟು ಸುಂದರ್‌ ಸಿಂಗ್‌ ಗುರ್ಜಾರ್‌ ಅವರು ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರು.

2017ರ ಐಪಿಸಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಜಾವಲಿನ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಥ್ಲೀಟ್‌ ಸುಂದರ್‌ ಸಿಂಗ್‌ ಗುರ್ಜಾರ್‌ 60.36 ಮೀಟರ್‌ ದೂರ ಜಾವಲಿನ್‌ ಎಸೆಯುವ ಮೂಲಕ ಚಿನ್ನದ ಗುರಿ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದಾರೆ.

ರಿಯೊ ಡಿ ಜನೈರೊದಲ್ಲಿ ನಡೆದ 2016ರ ಪ್ಯಾರಾಲಿಂಪಿಕ್ಸ್‌ನಿಂದ ತಾಂತ್ರಿಕ ಕಾರಣದಿಂದಾಗಿ ಹೊರಗುಳಿದಿದ್ದ ಸುಂದರ್‌ ಸಿಂಗ್‌ ಗುರ್ಜಾರ್‌ ಈ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ADVERTISEMENT

ಸ್ಪರ್ಧೆಯ ನಂತರ ಮಾತನಾಡಿದ ಸುಂದರ್ ಸಿಂಗ್‌ ‘ರಿಯೊ ಕೂಟಕ್ಕಾಗಿ ಕಠಿಣ ಪರಿಶ್ರಮ ನಡೆಸಿದ್ದೆ. ಅಲ್ಲಿ ಸ್ಪರ್ಧಿಸಲು ಸಾಧ್ಯವಾಗದೇ ಇದ್ದಾಗ ತುಂಬ ನಿರಾಸೆಗೆ ಒಳಗಾಗಿದ್ದೆ. ನನ್ನ ಆತ್ಮಬಲವೇ ಕುಗ್ಗಿಹೋಗಿತ್ತು. ಆದರೆ ಈಗ ಪ್ರಶಸ್ತಿ ಗೆದ್ದಿರುವುದು  ಖುಷಿ ಯಾಗಿದೆ’ ಎಂದು ಹೇಳಿದರು.

‘ಇಲ್ಲಿ ಜಯಿಸಿದ ಚಿನ್ನದ ಪದಕ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರಕವಾಗಲಿದೆ. ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕ್ರೀಡಾಕೂಟದಲ್ಲಿ ಇನ್ನಷ್ಟು ಉತ್ತಮವಾಗಿ ಜಾವೆಲಿನ್ ಎಸೆಯಲು ಪ್ರಯತ್ನಿಸುತ್ತೇನೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

**

ಸ್ವಲ್ಪದರಲ್ಲೇ ತಪ್ಪಿದ ಪದಕ: ಜಾವೆಲಿನ್‌ ಥ್ರೋದ ಎಫ್‌46 ವಿಭಾಗದಲ್ಲಿ ಭಾರತಕ್ಕೆ ಸ್ಪಲ್ಪದರಲ್ಲೇ ಪದಕ ತಪ್ಪಿತು. ಈ ಸ್ಪರ್ಧೆಯಲ್ಲಿ 55.12 ಮೀಟರ್ಸ್ ದೂರ ಎಸೆದ ರೋಹ್ಟಕ್‌ನ ರಿಂಕು ನಾಲ್ಕನೆ ಯವರಾದರು. ಸ್ವಲ್ಪದರಲ್ಲೇ ಕಂಚಿನ ಪದಕದಿಂದ ವಂಚಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.