ADVERTISEMENT

ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಕ್ರಿಕೆಟ್ ಪಂದ್ಯ: ಅಂಗಣಕ್ಕಿಳಿಯದ ಆಟಗಾರರು

ಏಜೆನ್ಸೀಸ್
Published 16 ಜೂನ್ 2018, 19:51 IST
Last Updated 16 ಜೂನ್ 2018, 19:51 IST
ಪಂದ್ಯ ಮುಂದುವರಿಸಲು ಒಪ್ಪಿಕೊಂಡ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂದಿಮಲ್, ಅಂಪೈರ್ ಅಲೀಮ್ ದಾರ್ ಅವರಿಂದ ಚೆಂಡು ಪಡೆದರು ಎಎಫ್‌ಪಿ ಚಿತ್ರ
ಪಂದ್ಯ ಮುಂದುವರಿಸಲು ಒಪ್ಪಿಕೊಂಡ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂದಿಮಲ್, ಅಂಪೈರ್ ಅಲೀಮ್ ದಾರ್ ಅವರಿಂದ ಚೆಂಡು ಪಡೆದರು ಎಎಫ್‌ಪಿ ಚಿತ್ರ   

ಗ್ರಾಸ್ ಐಲೆಟ್‌, ವೆಸ್ಟ್ ಇಂಡೀಸ್‌ (ಎಎಫ್‌ಪಿ): ಚೆಂಡು ವಿರೂಪಗೊಳಿಸಲಾಗಿದೆ ಎಂಬ ಸಂದೇಹದಿಂದ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಅಂಗಣಕ್ಕೆ ಇಳಿಯದೇ ಉಳಿದರು. ಆತಿಥೇಯರ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಈ ಕುತೂಹಲಕಾರಿ ಪ್ರಸಂಗಕ್ಕೆ ಸಾಕ್ಷಿಯಾಯಿತು.

ಪಂದ್ಯದ ಎರಡನೇ ದಿನ ವಾದ ಶುಕ್ರವಾರ ದಿನದಾಟ ಮುಕ್ತಾ ಯದ ಸಂದರ್ಭದಲ್ಲಿ ಚೆಂಡು ವಿರೂಪ ಗೊಂಡಿರುವ ಕುರಿತು ಅಂಪೈರ್‌ಗಳಾದ ಅಲೀಮ್ ದಾರ್‌ ಮತ್ತು ಇಯಾನ್‌ ಗೌಲ್ಡ್‌ ಸಂದೇಹ ವ್ಯಕ್ತಪಡಿಸಿದ್ದರು.

ಅದೇ ಚೆಂಡಿನಲ್ಲಿ ಮೂರನೇ ದಿನ ಆಡುವುದಿಲ್ಲ ಎಂದು ಶ್ರೀಲಂಕಾ ತಂಡದವರು ಹೇಳಿದ್ದರು. ಹೀಗಾಗಿ ಬೆಳಿಗ್ಗೆ ತಂಡವನ್ನು ಅಂಗಣಕ್ಕೆ ಇಳಿಸಲು ನಾಯಕ ದಿನೇಶ್ ಚಾಂದಿಮಲ್ ಮುಂದಾಗಲಿಲ್ಲ.

ADVERTISEMENT

ಕೊನೆಗೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್‌ ಅವರು ಮಧ್ಯಪ್ರವೇಶಿಸಿ ತಂಡದ  ಕೋಚ್‌ ಚಂದಿಕಾ ಹತುರುಸಿಂಘ ಮತ್ತು ವ್ಯವಸ್ಥಾಪಕ ಅಸಾಕ ಗುರುಸಿನ್ಹಾ ಅವರೊಂದಿಗೆ ಮಾತುಕತೆ ನಡೆಸಿದರು. ಒಂದು ತಾಸಿನ ನಂತರ ಪಂದ್ಯ ಮುಂದುವರಿಯಿತು. 

ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 253 ರನ್‌ ಗಳಿಸಿತ್ತು.

ಉತ್ತರವಾಗಿ ಎರಡನೇ ದಿನ ವೆಸ್ಟ್ ಇಂಡೀಸ್‌ ಎರಡು ವಿಕೆಟ್‌ಗಳಿಗೆ 118 ರನ್‌ ಗಳಿಸಿತ್ತು. ಮೂರನೇ ದಿನದಾಟದಲ್ಲಿ, ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ವೆಸ್ಟ್ ಇಂಡೀಸ್‌ ನಾಲ್ಕು ವಿಕೆಟ್‌ಗಳಿಗೆ 185 ರನ್‌ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.