ADVERTISEMENT

ವೇಟ್‌ಲಿಫ್ಟಿಂಗ್‌: ರಾಹುಲ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ರಗಳ ವೆಂಕಟ್‌ ರಾಹುಲ್‌  ಥಾಯ್ಲೆಂಡ್‌ನ ಬಾಂಗ್‌ ಸಾಯೆನ್‌ನಲ್ಲಿ ನಡೆಯುತ್ತಿರುವ 16ನೇ ಏಷ್ಯನ್‌ ಯೂತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ  ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಸೇರಿದಂತೆ ಒಟ್ಟು ಮೂರು ಪದಕ ಪಡೆದುಕೊಂಡಿದ್ದಾರೆ.

ಗುರುವಾರ ನಡೆದ ಬಾಲಕರ 77 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು 133 ಕೆಜಿ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ  163 ಮತ್ತು 296 ಕೆಜಿ ವಿಭಾಗಗಳಲ್ಲಿ ಬಂಗಾರ ತಮ್ಮದಾಗಿಸಿಕೊಂಡರು.

ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಮಂಗಳವಾರ ಬಾಲಕಿಯರ ವಿಭಾಗದ 44ಕೆಜಿ  ಸ್ಪರ್ಧೆಯಲ್ಲಿ ಮೋಹಿನ್‌ ಚವ್ಹಾಣ್‌,  ಬಾಲಕರ ವಿಭಾಗದ 56 ಕೆಜಿ ಸ್ಪರ್ಧೆಯಲ್ಲಿ ಲಾಲ್‌ಚನ್ಹಿಮಾ ಹಾಗೂ ಬುಧವಾರ ನಡೆದ ಬಾಲಕರ ವಿಭಾಗದ 62 ಕೆಜಿ ವಿಭಾಗದಲ್ಲಿ ಲಾಲು ಠಾಕು 4ನೇ ಸ್ಥಾನ ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.