ADVERTISEMENT

ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಕಠ್ಮಂಡು (ಪಿಟಿಐ): ಭಾರತ ತಂಡದವರು ಎಎಫ್‌ಸಿ ಚಾಲೆಂಜ್ ಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ತಾಜಿಕಿಸ್ತಾನದ ಸವಾಲನ್ನು ಎದುರಿಸಲಿದ್ದಾರೆ.

ಕಠ್ಮಂಡುವಿನ ದಶರಥ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸಕಾರಾತ್ಮಕ ಆರಂಭ ಪಡೆಯುವ ನಿರೀಕ್ಷೆಯಲ್ಲಿ ಸುನಿಲ್ ಚೆಟ್ರಿ ಬಳಗ ಇದೆ. ಆದರೆ ಫಿಫಾ ರ‌್ಯಾಂಕಿಂಗ್‌ನಲ್ಲಿ ತನಗಿಂತ ಮೇಲಿನ ಕ್ರಮಾಂಕದಲ್ಲಿರುವ ಎದುರಾಳಿಗಳ ವಿರುದ್ಧ ಗೆಲುವು ಪಡೆಯಲು ಭಾರತದ ಆಟಗಾರರು ಕಠಿಣ ಪ್ರಯತ್ನ ನಡೆಸುವುದು ಅಗತ್ಯ.

ಟೂರ್ನಿಗೆ ಸಜ್ಜಾಗುವ ಹಾದಿಯಲ್ಲಿ ಭಾರತ ತಂಡ ಅಜರ್‌ಬೈಜಾನ್ ಮತ್ತು ಓಮನ್ ವಿರುದ್ಧ ಸೌಹಾರ್ದ ಪಂದ್ಯಗಳನ್ನಾಡಿತ್ತು. ಆದರೆ ಎರಡೂ ಪಂದ್ಯಗಳಲ್ಲಿ ಚೇತರಿಕೆಯ ಪ್ರದರ್ಶನ ನೀಡಿರಲಿಲ್ಲ. ಈ ಪಂದ್ಯಗಳಲ್ಲಿ ಭಾರತ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸಿರಲಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.