ADVERTISEMENT

ಶೂಟರ್‌ ಜಿತು ರೈ ಗುರಿಗೆ ಒಲಿದ ಚಿನ್ನದ ಪದಕ

ಏಜೆನ್ಸೀಸ್
Published 9 ಏಪ್ರಿಲ್ 2018, 3:05 IST
Last Updated 9 ಏಪ್ರಿಲ್ 2018, 3:05 IST
ಶೂಟರ್‌ ಜಿತು ರೈ ............ ಚಿತ್ರಕೃಪೆ: ಟೈಮ್ಸ್‌ ಆಫ್‌ ಇಂಡಿಯಾ
ಶೂಟರ್‌ ಜಿತು ರೈ ............ ಚಿತ್ರಕೃಪೆ: ಟೈಮ್ಸ್‌ ಆಫ್‌ ಇಂಡಿಯಾ   

ಗೋಲ್ಡ್‌ಕೋಸ್ಟ್‌ : ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಸೋಮವಾರ ಮತ್ತೊಂದು ಚಿನ್ನದ ಪದಕ ಲಭಿಸಿದೆ.

ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಶೂಟರ್‌ ಜಿತು ರೈ ಇಟ್ಟ ಗುರಿಗೆ ಚಿನ್ನದ ಪದಕ ಸಿಕ್ಕಿದೆ. ಈ ಕ್ರೀಡಾಕೂಟದ ದಾಖಲೆಯ 235.1 ಪಾಯಿಂಟ್‌ ಗಳಿಸುವ ಮೂಲಕ ಜಿತು ಚಿನ್ನ ಗೆದ್ದರು.

233.5 ಪಾಯಿಂಗ್‌ ಗಳಿಸಿದ ಆಸ್ಟ್ರೇಲಿಯಾದ ಕೆರ್ರಿ ಬೆಲ್‌ ಬೆಳ್ಳಿ ಪದಕಕ್ಕೆ ಮತ್ತು 214.3 ಪಾಯಿಂಟ್‌ನಿಂದ ಭಾರತದವರೇ ಆದ ಓಂ ಮಿಥರ್‌ವಾಲ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.