ADVERTISEMENT

ಶೂಟಿಂಗ್‌: ಅಖಿಲ್‌ಗೆ ಚಿನ್ನ

ಪಿಟಿಐ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST
ಶೂಟಿಂಗ್‌: ಅಖಿಲ್‌ಗೆ ಚಿನ್ನ
ಶೂಟಿಂಗ್‌: ಅಖಿಲ್‌ಗೆ ಚಿನ್ನ   

ನವದೆಹಲಿ: ಭಾರತದ ಯುವ ಶೂಟರ್‌ ಅಖಿಲ್‌ ಶೆರಾನ್‌ ಮೆಕ್ಸಿಕೊದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ನ 50 ಮೀಟರ್‌ ರೈಫಲ್ ತ್ರಿ ಪೊಸಿಷನ್‌ನಲ್ಲಿ ಚಿನ್ನ ಗೆದ್ದಿದ್ದಾರೆ.

ಈ ಸಾಧನೆ ಮೂಲಕ ವಿಶ್ವಕಪ್‌ನಲ್ಲಿ ಪದಕ ಗೆದ್ದ ನಾಲ್ಕನೇ ಅತ್ಯಂತ ಕಿರಿಯ ಶೂಟರ್ ಎಂಬ ಶ್ರೇಯ ಅವರದಾಯಿತು.

ವಿಶ್ವಕಪ್‌ನ ಆರಂಭದ ದಿನ ದಿಂದಲೇ ಭಾರತ ಪಾರಮ್ಯ ಮೆರೆಯುತ್ತಿದ್ದು ಶಹಜಾರ್ ರಿಜ್ವಿ, ಮನು ಬಾಕರ್‌, ಮೆಹುಲಿ ಘೋಷ್‌ ಮತ್ತು ಅಂಜುಮ್‌ ಮೌದ್ಗಿಲ್‌ ಗೆದ್ದ ಪದಕ ಗಳೊಂದಿಗೆ ಪಾಯಿಂಟ್ ಪಟ್ಟಿ ಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.

ADVERTISEMENT

ಭಾನುವಾರ ನಡೆದ  ಫೈನಲ್‌ನಲ್ಲಿ ಅಖಿಲ್‌ 455.6 ಪಾಯಿಂಟ್‌ ಗಳಿಸಿದರು. ಆಸ್ಟ್ರಿಯಾದ ಬೆರ್ನಾಡ್ ಪಿಕಲ್‌ 452 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಗಳಿಸಿದರು.

ವಿಶ್ವಕಪ್‌ನಲ್ಲಿ 38 ಪದಕಗಳನ್ನು ಗಳಿಸಿರುವ ಹಂಗರಿಯ ಪೀಟರ್ ಸಿಡಿ, ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಫ್ರಾನ್ಸ್‌ನ ಅಲೆಕ್ಸಿ ರೆನಾಲ್ಡ್‌, ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಹಂಗರಿಯ ಇಸ್ತವಾನ್ ಪೆನಿ, ಪೊಸಿಷನ್ ತ್ರಿ ವಿಭಾಗದ ಪ್ರತಿಭಾವಂತ ಸಂಜೀವ್‌ ರಜಪೂತ್‌ ಮುಂತಾದವರನ್ನು ಹಿಂದಿಕ್ಕಿ ಅಖಿಲ್‌ ಸಾಧನೆ ಮೆರೆದರು.

ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಪೆನಿ ಮೊದಲ ಸ್ಥಾನ ಮತ್ತು ಸಂಜೀವ್ ರಜಪೂತ್‌ ಎರಡನೇ ಸ್ಥಾನ ಗಳಿಸಿದ್ದರು. ಅಖಿಲ್‌ಗೆ ನಾಲ್ಕನೇ ಸ್ಥಾನ ಲಭಿಸಿತ್ತು.

ಮನು ಬಾಕರ್ ಮಹಿಳೆಯರ 25 ಮೀಟರ್‌ ಪಿಸ್ತೂಲ್ ವಿಭಾಗದ ಫೈನಲ್‌ಗೆ ಪ್ರವೇಶಿಸಿದ್ದು ಮತ್ತೊಂದು ಪದಕ ಗಳಿಸುವ ಭರವಸೆ ಮೂಡಿಸಿದ್ದಾರೆ.

**

50 ಮೀಟರ್‌ ರೈಫಲ್ ತ್ರಿ ಪೊಸಿಷನ್‌ನಲ್ಲಿ ಮೂಡಿದ ಚಿನ್ನದ ಸಾಧನೆ

ಮಹಿಳೆಯರ 25 ಮೀಟರ್‌ ಪಿಸ್ತೂಲ್ ವಿಭಾಗದಲ್ಲಿ ಮನು ಬಾಕರ್‌ ಫೈನಲ್‌ಗೆ

ಬೆರ್ನಾಡ್ ಪಿಕಲ್‌ಗೆ ಬೆಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.