ADVERTISEMENT

ಶ್ರೀಹರಿ ನಟರಾಜ್‌ಗೆ ನಿರಾಸೆ

ಪಿಟಿಐ
Published 9 ಏಪ್ರಿಲ್ 2018, 20:21 IST
Last Updated 9 ಏಪ್ರಿಲ್ 2018, 20:21 IST
ಕ್ಯಾಮರಾನ್‌ ವ್ಯಾನ್‌ ಡೆರ್‌ ಬರ್ಗ್‌
ಕ್ಯಾಮರಾನ್‌ ವ್ಯಾನ್‌ ಡೆರ್‌ ಬರ್ಗ್‌   

ಗೋಲ್ಡ್ ಕೋಸ್ಟ್‌: ಭಾರತದ ಈಜುಪಟು ಶ್ರೀಹರಿ ನಟರಾಜ್‌ ಪುರುಷರ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಿಂದ ಹೊರಬಿದ್ದರು. ಎರಡನೇ ಹೀಟ್‌ನಲ್ಲಿ ಅವರು ಆರನೇ ಸ್ಥಾನ ಗಳಿಸಿದರು. ಸ್ಪರ್ಧೆಯಲ್ಲಿ ಒಟ್ಟು ಏಳು ಮಂದಿ ಇದ್ದರು.

ಕ್ಯಾಮರಾನ್‌ ಹ್ಯಾಟ್ರಿಕ್‌: ಆ್ಯಡಂ ಪೀಟಿಗೆ ಆಘಾತ ನೀಡಿದ ದಕ್ಷಿಣ ಆಫ್ರಿಕಾದ ಕ್ಯಾಮರಾನ್‌ ವ್ಯಾನ್‌ ಡೆರ್‌ ಬರ್ಗ್‌ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದರು. 26.58 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು 50 ಮೀಟರ್ಸ್‌ ವಿಭಾಗದ ಸ್ಪರ್ಧೆಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT