ADVERTISEMENT

ಸಂಗಕ್ಕಾರ, ವೈಟ್ ಬ್ಯಾಟಿಂಗ್ ವೈಭವ

​ಪ್ರಜಾವಾಣಿ ವಾರ್ತೆ
Published 1 ಮೇ 2012, 19:30 IST
Last Updated 1 ಮೇ 2012, 19:30 IST
ಸಂಗಕ್ಕಾರ, ವೈಟ್ ಬ್ಯಾಟಿಂಗ್ ವೈಭವ
ಸಂಗಕ್ಕಾರ, ವೈಟ್ ಬ್ಯಾಟಿಂಗ್ ವೈಭವ   

ಕಟಕ್ (ಪಿಟಿಐ): ಕುಮಾರ ಸಂಗಕ್ಕಾರ ಮತ್ತು ಕೆಮರೂನ್ ವೈಟ್ ತೋರಿದ ಬ್ಯಾಟಿಂಗ್ ವೈಭವದ ನೆರವಿನಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 13 ರನ್‌ಗಳ ಗೆಲುವು ಪಡೆಯಿತು.


ಬಾರಾಬತಿ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಚಾರ್ಜರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 186 ರನ್ ಪೇರಿಸಿದರೆ, ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 173 ರನ್ ಗಳಿಸಲಷ್ಟೇ ಯಶಸ್ವಿಯಾಯಿತು.

ನಾಯಕ ಸಂಗಕ್ಕಾರ (82, 52 ಎಸೆತ, 10 ಬೌಂ, 2 ಸಿಕ್ಸರ್) ಮತ್ತು ವೈಟ್ (74, 45 ಎಸೆತ, 4 ಬೌಂ, 4 ಸಿಕ್ಸರ್) ಅವರ ಅಮೋಘ ಬ್ಯಾಟಿಂಗ್ ಈ ಪಂದ್ಯದ ಮಹತ್ವದ ಅಂಶ. ಮೂರನೇ ವಿಕೆಟ್‌ಗೆ ಇವರಿಬ್ಬರು 157 ರನ್‌ಗಳ ಜೊತೆಯಾಟ ನೀಡಿದರು. 

ಚಾರ್ಜರ್ಸ್ ತಂಡ ಪಾರ್ಥಿವ್ ಪಟೇಲ್ (0) ಮತ್ತು ಶಿಖರ್ ಧವನ್ (13) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಸಂಗಕ್ಕಾರ ಹಾಗೂ ವೈಟ್ ನೆರವಿಗೆ ನಿಂತರು. ಈ ತಂಡ ಕೊನೆಯ ಮೂರು ಓವರ್‌ಗಳಲ್ಲಿ 56 ರನ್ ಪೇರಿಸಿತು. ಸೌರವ್ ಗಂಗೂಲಿ ಎಸೆದ 18ನೇ ಓವರ್ ಮತ್ತು ಆಶೀಶ್ ನೆಹ್ರಾ ಎಸೆದ 19ನೇ ಓವರ್‌ನಲ್ಲಿ ತಲಾ 25 ರನ್‌ಗಳು ಬಂದವು!

ಕಠಿಣ ಗುರಿ ಬೆನ್ನಟ್ಟಿದ ಸೌರವ್ ಗಂಗೂಲಿ ಬಳಗ ಗೆಲುವು ಪಡೆಯಲು ತಕ್ಕಮಟ್ಟಿನ ಪ್ರಯತ್ನ ನಡೆಸಿತು. ಮೈಕಲ್ ಕ್ಲಾರ್ಕ್ (41, 31 ಎಸೆತ, 7 ಬೌಂ), ಗಂಗೂಲಿ (45, 40 ಎಸೆತ, 5 ಬೌಂ, 1 ಸಿಕ್ಸರ್) ಹಾಗೂ ಸ್ಟೀವನ್ ಸ್ಮಿತ್ (ಅಜೇಯ 47, 27 ಎಸೆತ, 3 ಬೌಂ, 2 ಸಿಕ್ಸರ್) ಹೋರಾಟ ನಡೆಸಿದರೂ ಗೆಲುವಿನ ಗಡಿ ದಾಟಲು ವಿಫಲವಾಯಿತು.

ಕ್ಲಾರ್ಕ್ ತಾವಾಡಿದ ಮೊದಲ ಪಂದ್ಯದಲ್ಲೇ ಮಿಂಚಿದರು. ಗಂಗೂಲಿ ಮತ್ತು ಕ್ಲಾರ್ಕ್ ಎರಡನೇ ವಿಕೆಟ್‌ಗೆ 90 ರನ್ ಸೇರಿಸಿದರು. ಈ ಹಂತದಲ್ಲಿ ಪುಣೆ ಗೆಲುವಿನ ಕನಸು ಕಂಡಿತ್ತು. ಆದರೆ ಆರು ರನ್‌ಗಳ ಅಂತರದಲ್ಲಿ ಇವರಿಬ್ಬರು ಔಟಾದ ಕಾರಣ ತಂಡ ಒತ್ತಡಕ್ಕೆ ಒಳಗಾಯಿತು. ರಾಬಿನ್ ಉತ್ತಪ್ಪ (26) ಮತ್ತು ಸ್ಮಿತ್ ಕೊನೆಯಲ್ಲಿ ಗೆಲುವಿಗಾಗಿ ನಡೆಸಿದ ಹೋರಾಟಕ್ಕೆ ಫಲ ಲಭಿಸಲಿಲ್ಲ.

ಈ ಪಂದ್ಯದಲ್ಲಿ ಎರಡೂ ತಂಡಗಳು ಇನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡವು. ಚಾರ್ಜರ್ಸ್ ತಂಡದ ಪಾರ್ಥಿವ್ ಪಟೇಲ್ ಮತ್ತು ವಾರಿಯರ್ಸ್‌ನ ಮನೀಷ್ ಪಾಂಡೆ ಮೊದಲ ಎಸೆತದಲ್ಲೇ ಔಟಾದರು.

ಸ್ಕೋರ್ ವಿವರ

ADVERTISEMENT

ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ
4 ವಿಕೆಟ್‌ಗೆ 186

ಪಾರ್ಥಿವ್ ಪಟೇಲ್ ಬಿ ಮರ್ಲಾನ್ ಸ್ಯಾಮುಯೆಲ್ಸ್  00

ಶಿಖರ್ ಧವನ್ ಬಿ ಭುವನೇಶ್ವರ್ ಕುಮಾರ್  13

ಕೆಮರೂನ್ ವೈಟ್ ಸಿ ಸ್ಮಿತ್ ಬಿ ವೇಯ್ನ ಪಾರ್ನೆಲ್  74

ಕುಮಾರ ಸಂಗಕ್ಕಾರ ಬಿ ಆಶೀಶ್ ನೆಹ್ರಾ  82

ಜೆಪಿ ಡುಮಿನಿ ಔಟಾಗದೆ  04

ವಿಪ್ಲವ್ ಸಮಂತರಾಯ್ ಔಟಾಗದೆ  02

ಇತರೆ: (ಬೈ-2, ಲೆಗ್‌ಬೈ-8, ನೋಬಾಲ್-1)  11

ವಿಕೆಟ್ ಪತನ: 1-0 (ಪಟೇಲ್; 0.1), 2-23 (ಧವನ್; 4.4), 3-180 (ಸಂಗಕ್ಕಾರ; 18.6), 4-180 (ವೈಟ್; 19.1)

ಬೌಲಿಂಗ್: ಮರ್ಲಾನ್ ಸ್ಯಾಮುಯೆಲ್ಸ್ 3-0-33-1, ವೇಯ್ನ ಪಾರ್ನೆಲ್ 4-1-25-1, ಆಶೀಶ್ ನೆಹ್ರಾ 4-0-41-1, ಭುವನೇಶ್ವರ್ ಕುಮಾರ್ 4-0-22-1, ಮುರಳಿ ಕಾರ್ತಿಕ್ 2-0-16-0, ಸೌರವ್ ಗಂಗೂಲಿ 3-0-39-0

ಪುಣೆ ವಾರಿಯರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 173
ಮನೀಷ್ ಪಾಂಡೆ ಸಿ ಸಂಗಕ್ಕಾರ ಬಿ ಅಂಕಿತ್ ಶರ್ಮ  00

ಮೈಕಲ್ ಕ್ಲಾರ್ಕ್ ರನೌಟ್  41

ಸೌರವ್ ಗಂಗೂಲಿ ಸಿ ವೈಟ್ ಬಿ ಶಿಖರ್ ಧವನ್  45

ಸ್ಟೀವನ್ ಸ್ಮಿತ್ ಔಟಾಗದೆ  47

ಉತ್ತಪ್ಪ ಸಿ ಹ್ಯಾರಿಸ್ (ಬದಲಿ ಆಟಗಾರ) ಬಿ ಆಶೀಶ್ ರೆಡ್ಡಿ  26

ಮಿಥುನ್ ಮನ್ಹಾಸ್ ಸಿ ಸಂಗಕ್ಕಾರ ಬಿ ಪ್ರತಾಪ್ ಸಿಂಗ್  07

ಮರ್ಲಾನ್ ಸ್ಯಾಮುಯೆಲ್ಸ್ ಔಟಾಗದೆ  01

ಇತರೆ (ಲೆಗ್‌ಬೈ-1, ವೈಡ್-3, ನೋಬಾಲ್-2)  06

ವಿಕೆಟ್ ಪತನ: 1-0 (ಪಾಂಡೆ; 0.1), 2-90 (ಕ್ಲಾರ್ಕ್; 11.4), 3-96 (ಗಂಗೂಲಿ; 12.4), 4-158 (ರಾಬಿನ್; 18.5), 5-172 (ಮನ್ಹಾಸ್; 19.5)

ಬೌಲಿಂಗ್: ಅಂಕಿತ್ ಶರ್ಮ 2-0-9-1, ಜೆಪಿ ಡುಮಿನಿ 3-0-25-0, ವೀರ್ ಪ್ರತಾಪ್ ಸಿಂಗ್ 4-0-31-1, ಡೇಲ್ ಸ್ಟೇನ್ 4-0-46-0, ಅಮಿತ್ ಮಿಶ್ರಾ 3-0-20-0, ಆಶೀಶ್ ರೆಡ್ಡಿ 3-0-32-1, ಶಿಖರ್ ಧವನ್ 1-0-9-0
ಫಲಿತಾಂಶ: ಡೆಕ್ಕನ್ ಚಾರ್ಜರ್ಸ್‌ಗೆ 13 ರನ್ ಜಯ,
ಪಂದ್ಯಶ್ರೇಷ್ಠ: ಕುಮಾರ ಸಂಗಕ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.