ಹೈದರಾಬಾದ್ (ಪಿಟಿಐ): `ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕದ ಸಾಧನೆ ನನಗೆ ಸ್ಫೂರ್ತಿಯಾಯಿತು~ ಎಂದು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ನೂತನ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ನುಡಿದಿದ್ದಾರೆ.
`ಸಚಿನ್ ಶತಕ ಗಳಿಸಿದ ದಿನ ನನಗೆ ಸೆಮಿಫೈನಲ್ ಪಂದ್ಯವಿತ್ತು. ಅದು ನನಗೆ ಸ್ಫೂರ್ತಿ ನೀಡಿತು. ಈ ಟೂರ್ನಿಯ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಆದೆ. ಇದಕ್ಕೆ ಕಾರಣ ತೆಂಡೂಲ್ಕರ್ ಆಟ. ಅವರಿಗೆ ನನ್ನ ಧನ್ಯವಾದಗಳು~ ಎಂದು ಸೈನಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.