ನವದೆಹಲಿ : ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಅಚ್ಚಳಿಯದ ಸಾಧನೆಗಳನ್ನು ಮಾಡಿರುವ ಸಚಿನ್ ತೆಂಡೂಲ್ಕರ್ ಹಾಗೂ ವಿಜ್ಞಾನಿ ಕನ್ನಡಿಗ ಪ್ರೊ. ಸಿ ಎನ್ ಆರ್ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಷ್ಟ್ರಪತಿಗಳು ನಿರ್ಧರಿಸಿರುವುದಾಗಿ ರಾಷ್ಟ್ರಪತಿ ಭವನದ ವಕ್ತಾರ ವೇಣು ರಾಜಾಮೋನಿ ಅವರು ಪ್ರಕಟಣೆಯಲ್ಲಿ ಶನಿವಾರ ತಿಳಿಸಿದ್ದಾರೆ.
ಕ್ರಿಕೆಟಿನಲ್ಲಿ ಸಚಿನ್ ಅವರ ಜೀವಮಾನ ಸಾಧನೆಗೆ ಈ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸುತ್ತಿದೆ. ಈ ಮೂಲಕ ಕ್ರೀಡೆಯಲ್ಲಿ ಭಾರತ ರತ್ನ ಗೌರವಕ್ಕೆ ಆಯ್ಕೆಯಾದ ಮೊದಲ ಕ್ರೀಡಾಪಟು ಎನಿಸಿದ್ದಾರೆ.
ಇದೇ ವೇಳೆ ಕನ್ನಡಿಗ ಪ್ರೊ. ಸಿ ಎನ್ ಆರ್ ರಾವ್ ಅವರಿಗೂ ಭಾರತ ರತ್ನ ಪ್ರಶಸ್ತಿ ಲಭಿಸಲಿದೆ. ರಾವ್ ಅವರು ಭಾರತದ ಚೊಚ್ಚಲ ಮಂಗಳಯಾನ ಯೋಜನೆಯ ರೂವಾರಿ ಆಗಿದ್ದಾರೆ.
ಕೊನೆಯದಾಗಿ 2008ರಲ್ಲಿ ಪಂಡಿತ್ ಭೀಮಸೇನ ಜೋಷಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.