ADVERTISEMENT

‘ಸಚಿನ್ 40 ವರ್ಷವಾದರೂ ಕಣದಲ್ಲಿದ್ದರು, ನೆಹ್ರಾ ಏಕೆ ಆಡಬಾರದು?’

ಏಜೆನ್ಸೀಸ್
Published 5 ಅಕ್ಟೋಬರ್ 2017, 13:25 IST
Last Updated 5 ಅಕ್ಟೋಬರ್ 2017, 13:25 IST
‘ಸಚಿನ್ 40 ವರ್ಷವಾದರೂ ಕಣದಲ್ಲಿದ್ದರು, ನೆಹ್ರಾ ಏಕೆ ಆಡಬಾರದು?’
‘ಸಚಿನ್ 40 ವರ್ಷವಾದರೂ ಕಣದಲ್ಲಿದ್ದರು, ನೆಹ್ರಾ ಏಕೆ ಆಡಬಾರದು?’   

ಮುಂಬೈ: ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ 40 ವರ್ಷ ವಯಸ್ಸಾದರೂ ಕಣದಲ್ಲಿದ್ದರು. ಹಾಗಿದ್ದ ಮೇಲೆ ಆಶಿಶ್‌ ನೆಹ್ರಾ ಏಕೆ ಆಡಬಾರದು ಎಂದು ಪ್ರಶ್ನಿಸಿರುವ ವಿರೇಂದ್ರ ಸೆಹ್ವಾಗ್‌ ತಂಡದ ಪರ ಆಯ್ಕೆಯಾಗಲು ವಯಸ್ಸು ಒಂದೇ ಮಾನದಂಡವಲ್ಲ ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಶನಿವಾರ ಆರಂಭವಾಗಲಿರುವ ಮೂರು ಪಂದ್ಯಗಳ ಟಿ–20 ಸರಣಿಯಲ್ಲಿ 38 ವರ್ಷದ ಆಶಿಶ್‌ ನೆಹ್ರಾ ಸ್ಥಾನ ಪಡೆದಿದ್ದಾರೆ. ನೆಹ್ರಾ ಆಯ್ಕೆ ಕುರಿತು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಹಿರಿಯ ಆಟಗಾರ ವಿರೇಂದ್ರ ಸೆಹ್ವಾಗ್‌ ಪ್ರತಿಕ್ರಿಯೆ ನೀಡಿದ್ದಾರೆ. 

ಸದ್ಯ ನೆಹ್ರಾ ಫಿಟ್‌ ಆಗಿದ್ದು, ಎದುರಾಳಿ ತಂಡಕ್ಕೆ ಕಡಿಮೆ ರನ್‌ ನೀಡುವ ಮೂಲಕ ಬೇಗ ವಿಕೆಟ್‌ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಜತೆಗೆ, ಆಸ್ಟ್ರೇಲಿಯಾ ವಿರುದ್ಧದ ಟಿ–20  ಸರಣಿಗೆ ನೆಹ್ರಾ ಆಯ್ಕೆ ನನಗೆ ಆಶ್ಚರ್ಯ ಉಂಟುಮಾಡಿಲ್ಲ. 15 ಸದಸ್ಯರ ತಂಡದಲ್ಲಿ ನೆಹ್ರಾ ಸ್ಥಾನ ಗಳಿಸಿರುವುದು ಸಂತೋಷ ತಂದಿದೆ ಎಂದು ಸೆಹ್ವಾಗ್‌ ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.