ADVERTISEMENT

ಸನ್‌ರೈಸರ್ಸ್ ವಿರುದ್ಧ ಸೆಹ್ವಾಗ್ ಆಡುವ ಸಾಧ್ಯತೆ

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST
ಸನ್‌ರೈಸರ್ಸ್ ವಿರುದ್ಧ ಸೆಹ್ವಾಗ್ ಆಡುವ ಸಾಧ್ಯತೆ
ಸನ್‌ರೈಸರ್ಸ್ ವಿರುದ್ಧ ಸೆಹ್ವಾಗ್ ಆಡುವ ಸಾಧ್ಯತೆ   

ನವದೆಹಲಿ (ಪಿಟಿಐ): ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಐಪಿಎಲ್ ಆರನೇ ಆವೃತ್ತಿಯಲ್ಲಿ ಶುಕ್ರವಾರ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಬೆನ್ನು ನೋವಿನ ಕಾರಣದಿಂದ ಮೊದಲ ಮೂರು ಪಂದ್ಯಗಳಲ್ಲಿ ಸೆಹ್ವಾಗ್ ಆಡಿರಲಿಲ್ಲ. ಈಗ ಚೇತರಿಸಿಕೊಂಡಿದ್ದು, ಗುರುವಾರ ಸಂಜೆ ಆಭ್ಯಾಸ ನಡೆಸುವ ಸಾಧ್ಯತೆಯಿದೆ.

`ಸೆಹ್ವಾಗ್ ಚೇತರಿಸಿಕೊಂಡಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಆಡುವ ವಿಶ್ವಾಸವಿದೆ' ಎಂದು ಡೇರ್‌ಡೆವಿಲ್ಸ್ ತಂಡದ ಮುಖ್ಯ ಸಲಹೆಗಾರ ಟಿ.ಎ. ಶೇಖರ್ ತಿಳಿಸಿದ್ದಾರೆ.

ಸೆಹ್ವಾಗ್ ಅನುಪಸ್ಥಿತಿಯಿಂದ ಪರದಾಡುತ್ತಿರುವ ಡೇರ್‌ಡೆವಿಲ್ಸ್ ಮೊದಲ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.