ADVERTISEMENT

ಸಾನಿಯಾ ಜೋಡಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 8 ಮೇ 2012, 19:30 IST
Last Updated 8 ಮೇ 2012, 19:30 IST

ಮ್ಯಾಡ್ರಿಡ್ (ಪಿಟಿಐ): ಭಾರತ ಸಾನಿಯಾ ಮಿರ್ಜಾ ಹಾಗೂ ಅವರ ಜೊತೆಗಾರ್ತಿ ಆಸ್ಟ್ರೇಲಿಯಾದ ಅನಾಸ್ತೇಸಿಯಾ ರಾಡಿಯೊನೊವಾ ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೋಲು ಕಂಡಿದ್ದಾರೆ.

ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ-ಅನಾಸ್ತೇಸಿಯಾ 3-6, 2-6ರಲ್ಲಿ ಜರ್ಮನಿಯ ಅನಾ-ಲೆನಾ ಗ್ರೊಯೆನ್‌ಫೆಲ್ಡ್ ಹಾಗೂ ಚೀನಾದ ಶುಯಿ ಜಾಂಗ್ ಎದುರು ಆಘಾತ ಅನುಭವಿಸಿದರು.

ಆರನೇ ಶ್ರೇಯಾಂಕ ಪಡೆದಿದ್ದ ಭಾರತ-ಆಸ್ಟ್ರೇಲಿಯಾದ ಜೋಡಿ ಎರಡೂ ಸೆಟ್‌ಗಳಲ್ಲಿ ನೀರಸ ಪ್ರದರ್ಶನ ತೋರಿತು. ಆರಂಭದಿಂದಲೇ ಎದುರಾಳಿ ಮೇಲೆ ಒತ್ತಡ ಹೇರಿದ ಗ್ರೊಯೆನ್‌ಫೆಲ್ಡ್ ಹಾಗೂ ಜಾಂಗ್ ಸುಲಭವಾಗಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.