ADVERTISEMENT

ಸಿದ್ದಪ್ಪ, ತಿಪ್ಪವ್ವಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಮಡಿಕೇರಿ: ಮೂಡಬಿದರೆಯ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ತಂಡವು ಮಡಿಕೇರಿಯಲ್ಲಿ ಬುಧವಾರ ಬೆಳಿಗ್ಗೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ  46ನೇ ರಾಜ್ಯ ಕ್ರಾಸ್‌ಕಂಟ್ರಿ ಓಟದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಬಾದಾಮಿಯ ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್‌ನ ಎಸ್.ಸಿದ್ದಪ್ಪ  12 ಕಿ.ಮೀ ಅಂತರವನ್ನು 40.32 ನಿಮಿಷದಲ್ಲಿ ಪೂರೈಸಿ, ಮೊದಲ ಸ್ಥಾನ ಗಳಿಸಿದರೆ, ಮಹಿಳೆಯರ ವಿಭಾಗದಲ್ಲಿ ಮೈಸೂರಿನ ತಿಪ್ಪವ್ವ ಸಣ್ಣಕ್ಕಿ 8 ಕಿ.ಮೀ ದೂರವನ್ನು 31.14 ನಿಮಿಷದಲ್ಲಿ ಪೂರೈಸಿ ಚಿನ್ನದ ಪದಕ ಗೆದ್ದರು.

ಫಲಿತಾಂಶಗಳು: ಪುರುಷರು (12 ಕಿ.ಮೀ): ಎಸ್. ಸಿದ್ಧಪ್ಪ (ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್ ಬಾದಾಮಿ)-1, ಅಪ್ಪಾಸಾಹೇಬ್ (ಬಾಗಲಕೋಟೆ)-2, ಎಂ.ಇ. ಹನೀಫ್ (ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್ ಬಾದಾಮಿ)-3, ಕಾಲ: 40.32ನಿಮಿಷ;

ಬಾಲಕರು (16 ವರ್ಷದೊಳಗಿನವರು; 3 ಕಿ.ಮೀ): ನವೀನ್ ಗೌಡ (ಎಸ್‌ಡಿಎಂ)-1, ವಿಠ್ಠಲ (ಎಸ್‌ಡಿಎಂ)-2, ಲೋಕ್ಯಾ (ಕೂಡಿಗೆ ಕ್ರೀಡಾ ಶಾಲೆ)-3;

18 ವರ್ಷದೊಳಗಿನವರು (6 ಕಿ.ಮೀ): ಪರಸಪ್ಪ ಎಂ. ಹಳಿಜೋಳ (ಬಾಗಲಕೋಟೆ)-1, ಅಭಿಲಾಷ್(ಆಳ್ವಾಸ್ ಕ್ಲಬ್ ಮೂಡಬಿದರೆ)-2, ಮಲ್ಲಿಕಾರ್ಜುನ ಜ್ಯೋತಿನವರ (ಎಸ್‌ಡಿಎಂ)-3; 20 ವರ್ಷದೊಳಗಿನವರು (8 ಕಿ.ಮೀ): ಬಿ.ಎಸ್. ಕೃಷ್ಣಪ್ಪ (ಎಸ್‌ಎಐ ಧಾರವಾಡ)-1, ಜಿ.ಪಿ. ವಿಶ್ವನಾಥ್ (ಎಸ್‌ಡಿಎಂ ಉಜಿರೆ)-2, ಎಸ್. ಸದಾಶಿವ (ಎಸ್‌ಡಿಎಂ)-3,

ಮಹಿಳೆಯರು (8ಕಿ.ಮೀ): ತಿಪ್ಪವ್ವ ಸಣ್ಣಕ್ಕಿ (ಮೈಸೂರು)-1, ಸ್ಮಿತಾ (ಮೈಸೂರು)-2, ಕೆ.ಸಿ. ಮಮತಾ (ಮೂಡಬಿದರೆ)-3, ಕಾಲ: 31.14ನಿಮಿಷ.

ಬಾಲಕಿಯರು: 16 ವರ್ಷ ಒಳಗಿನ ವಿಭಾಗ (3.ಕಿ.ಮೀ): ಮೃದುಲಾ (ಬೆಳಗಾವಿ)-1,  ನಿಖಿತಾ-2, ರಕ್ಷಿತಾ -3 (ಇಬ್ಬರೂ ಮೂಡಬಿದಿರೆಯ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್).18 ವರ್ಷದೊಳಗಿನವರು (4 ಕಿ.ಮೀ):  ಬಿ.ಕೆ. ಸುಪ್ರೀತಾ -1, ಕೆ.ಅನುಷ್ಕಾ-2, ಎಸ್.ಅಕ್ಷತಾ -3 (ಮೂವರೂ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಮೂಡಬಿದರೆ).
20 ವರ್ಷದೊಳಗಿನವರು (6 ಕಿ.ಮೀ): ಸೌಮ್ಯ (ಎಸ್.ಡಿ.ಎಂ.)-1,  ಕೆ.ಎಂ.  ಅರ್ಚನಾ (ಆಳ್ವಾಸ್ ಕ್ಲಬ್, ಮೂಡಬಿದರೆ)-2,  ಶ್ರದ್ಧಾರಾಣಿ (ಡಿವೈಎಸ್‌ಎಸ್)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.