ADVERTISEMENT

ಸೆಲ್ಟಿಕ್ ಕ್ಲಬ್‌ನಲ್ಲಿ ತರಬೇತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2012, 19:30 IST
Last Updated 28 ಏಪ್ರಿಲ್ 2012, 19:30 IST
ಸೆಲ್ಟಿಕ್ ಕ್ಲಬ್‌ನಲ್ಲಿ ತರಬೇತಿಗೆ ಆಯ್ಕೆ
ಸೆಲ್ಟಿಕ್ ಕ್ಲಬ್‌ನಲ್ಲಿ ತರಬೇತಿಗೆ ಆಯ್ಕೆ   

ಬೆಂಗಳೂರು: ಕೋಲ್ಕತ್ತದ ಪಂದುವಾ ಎಸ್‌ಬಿಎಸ್ ಹೈಸ್ಕೂಲ್‌ನ ಪ್ರೇಮಾನಂದ ಸಿಂಘ ಮತ್ತು ಮಂಗಲ್ ಮುರ್ಮು ಹಾಗೂ ನವದೆಹಲಿಯ ಸಿಆರ್‌ಪಿಎಫ್ ಹೈಸ್ಕೂಲ್‌ನ ಮುಕೇಶ್ ಕುಮಾರ್ ಅವರು ಸ್ಕಾಟ್ಲೆಂಡ್‌ನ ಸೆಲ್ಟಿಕ್ ಫುಟ್‌ಬಾಲ್ ಕ್ಲಬ್‌ನಲ್ಲಿ ತರಬೇತಿ ನಡೆಸುವ ಅದೃಷ್ಟ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮಹೀಂದ್ರಾ ಯೂತ್ ಫುಟ್‌ಬಾಲ್ ಚಾಲೆಂಜ್ ಅಂತರ ಶಾಲಾ ಟೂರ್ನಿಯಲ್ಲಿ (14 ವರ್ಷ ವಯಸ್ಸಿನೊಳಗಿನವರ) ಉತ್ತಮ ಪ್ರದರ್ಶನ ನೀಡಿದ 22 ಆಟಗಾರರು ನಾಲ್ಕು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸೆಲ್ಟಿಕ್ ಕ್ಲಬ್‌ನ ಕೋಚ್‌ಗಳ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರದ ಕೊನೆಯಲ್ಲಿ ಮೂವರ ಆಯ್ಕೆ ನಡೆದಿದೆ ಎಂದು ಮಾರ್ಕ್ ರೀಡ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.