ADVERTISEMENT

ಸೇನಾ ಅಕಾಡೆಮಿಗೆ ಭೇಟಿ ನೀಡಿದ ದೋನಿ

​ಪ್ರಜಾವಾಣಿ ವಾರ್ತೆ
Published 2 ಮೇ 2012, 19:30 IST
Last Updated 2 ಮೇ 2012, 19:30 IST
ಸೇನಾ ಅಕಾಡೆಮಿಗೆ ಭೇಟಿ ನೀಡಿದ ದೋನಿ
ಸೇನಾ ಅಕಾಡೆಮಿಗೆ ಭೇಟಿ ನೀಡಿದ ದೋನಿ   

ಚೆನ್ನೈ (ಪಿಟಿಐ): ಸಮವಸ್ತ್ರ ಧರಿಸಿದವರ ನಡುವೆ ಕ್ರಿಕೆಟ್ ತಾರೆಯ ಮಿಂಚು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದರೂ ಯೋಧರ ನಡುವೆ ಯೋಧ!

ಹೌದು; ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ಬುಧವಾರ ಇಲ್ಲಿನ ಸೇನಾ ಅಕಾಡೆಮಿಗೆ ಭೇಟಿ ನೀಡಿದಾಗ ಭೂಸೇನೆಯ ಅಧಿಕಾರಿಗಳು ತೊಡುವಂಥ ಪೋಷಾಕು ಧರಿಸಿದ್ದರು. ತಮ್ಮನ್ನು ಅಭಿನಂದಿಸಲು ಬಂದವರಿಗೆ ಮಂದಹಾಸದಿಂದಲೇ ಪ್ರತಿಯಾಗಿ ಕೃತಜ್ಞತೆ ಸಲ್ಲಿಸಿದರು.

ಕಳೆದ ವರ್ಷ ಪ್ರಾಂತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ರ‌್ಯಾಂಕ್ ಸ್ವೀಕರಿಸಿದ್ದ `ಮಹಿ~ ತಮ್ಮ ಮಾತುಗಳಿಂದ ಇಲ್ಲಿನ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಯುವಕರ ಹುಮ್ಮಸ್ಸು ಹೆಚ್ಚಿಸಿದರು. 
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿರುವ ದೋನಿ ಅಭ್ಯಾಸದ ವೇಳೆ ಬಿಡುವು ಮಾಡಿಕೊಂಡು ಈ ಅಕಾಡೆಮಿಗೆ ತೆರಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.