ADVERTISEMENT

ಸೋಮ್, ಬೋಪಣ್ಣಗೆ ಅರ್ಹತೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

(ಪಿಟಿಐ): ಭಾರತದ ಸೋಮದೇವ್ ದೇವ್‌ವರ್ಮನ್ ಹಾಗೂ ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಹಂತದಲ್ಲಿ ಆಡಲು ಅರ್ಹತೆ ಗಿಟ್ಟಿಸಿದ್ದಾರೆ.ಅರ್ಹತಾ ಸುತ್ತಿನಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ಸೋಮ್ 6-2, 6-4ರಲ್ಲಿ ಅಮೆರಿಕದ ಗ್ರೇಗ್ ಜೋನ್ಸ್ ಅವರನ್ನು ಸೋಲಿಸಿದರು.

ಬೋಪಣ್ಣ 7-6, 7-6ರಲ್ಲಿ ಜರ್ಮನಿಯ ಡೇನಿಯಲ್ ಬ್ರಾಂಡ್ಸ್ ಅವರನ್ನು ಮಣಿಸಿದರು. ಸೋಮ್ ಪ್ರಧಾನ ಹಂತದ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಅಡ್ರಿಯನ್ ಮನರಿನೊ ಅವರನ್ನು ಎದುರಿಸಲಿದ್ದಾರೆ. ಬೋಪಣ್ಣ ಆಸ್ಟ್ರೇಲಿಯಾದ ಬೆರ್ನಾಡ್ ಟಾಮಿಕ್ ಎದುರು ಪೈಪೋಟಿ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.