ADVERTISEMENT

ಸ್ಕ್ವಾಷ್: ಕ್ವಾರ್ಟರ್ ಫೈನಲ್‌ಗೆ ಭಾರತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಮಲ್‌ಹೌಸ್, ಫ್ರಾನ್ಸ್ (ಐಎಎನ್‌ಎಸ್): ಭಾರತ ತಂಡ ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಬುಧವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 2-1ರಲ್ಲಿ ಹಾಂಕಾಂಗ್ ಎದುರು ಗೆಲುವು ಸಾಧಿಸಿತು. ಭಾರತದ ಅಗ್ರ ಆಟಗಾರ ಸೌರವ್ ಘೋಷಾಲ್ 11-3, 11-8, 7-11, 11-6ರಲ್ಲಿ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿರುವ ಮ್ಯಾಕ್ಸ್ ಲೀ ಎದುರು ಗೆಲುವು ಪಡೆದು ಮೊದಲ ಮುನ್ನಡೆ ತಂದುಕೊಟ್ಟರು.

ಎರಡನೇ ಪಂದ್ಯದಲ್ಲಿ ರಮಿತಾ ಟಂಡನ್ 11-5, 11-9, 11-5ರಲ್ಲಿ ಯಪ್ ಜೀ ಫುಂಗ್ ಎದುರು ಗೆಲುವು ಸಾಧಿಸುವ ಮೂಲಕ ಭಾರತದ ಎಂಟರ ಘಟ್ಟದ ಹಾದಿಯನ್ನು ಸುಲಭಗೊಳಿಸಿದರು. ಆದರೆ, ಮಹತ್ವ ಕಳೆದುಕೊಂಡ ಮೂರನೇ ಸುತ್ತಿನ ಪಂದ್ಯದಲ್ಲಿ ಹರೀಂದರ್ ಪಾಲ್ ಸಂಧು ಸೋಲು ಕಂಡರು. ಲಿಯೊ ಯೂ 11-9, 11-7, 11-4ರಲ್ಲಿ ಹರೀಂದರ್ ಅವರನ್ನು ಮಣಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

`ಎಚ್' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ 3-0ರಲ್ಲಿ ವೆನಿಜುವೆಲಾ ಎದುರು ಗೆಲುವು ಸಾಧಿಸಿ ಅಗ್ರಸ್ಥಾನ ಗಳಿಸಿತ್ತು. ಈ ಪಂದ್ಯದಲ್ಲಿ ಮಹೇಶ್ 11-1, 11-2, 11-7 ರಲ್ಲಿ ಮಿಗಿಯೆಲ್ ವೆಲ್ಲೆನ್ನಲ್ಲಿ ಮೇಲೂ, ಹರೀಂದರ್ 11-3, 6-11, 11-8, 11-5ರಲ್ಲಿ ಗ್ಯಾಬ್ರಿಯಲ್ ಟೆರೆನ್ ವಿರುದ್ಧವೂ, ರಮಿತ್ ಟಂಡನ್ 1-2, 11-2, 11-3ರಲ್ಲಿ  ಮಿಗಿಯೆಲ್ ಮೆಂಡೆಜ್ ಮೇಲೂ ಗೆಲುವು ಸಾಧಿಸಿದ್ದರು.

ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡ ಅರ್ಜೆಂಟೀನಾ ಮತ್ತು ಫಿನ್ಲೆಂಡ್ ತಂಡಗಳನ್ನು ಮಣಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.