
ಪ್ರಜಾವಾಣಿ ವಾರ್ತೆಬೆಂಗಳೂರು: ಐಒಸಿಎಲ್ ತಂಡ ಇಲ್ಲಿ ನಡೆಯುತ್ತಿರುವ ಪಿಎಸ್‌ಪಿಬಿ ಇಂಟರ್ ಯೂನಿಟ್ ಸ್ನೂಕರ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.
ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಐಒಸಿಎಲ್ 4-2ರಲ್ಲಿ ಬಿಪಿಸಿಎಎಲ್ ಎದುರು ಜಯಿಸಿತು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಒಎನ್‌ಜಿಸಿ 4-0ರಲ್ಲಿ ಜಿಎಐಎಲ್ ತಂಡವನ್ನು ಮಣಿಸಿ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿತು.
ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಅರ್ಹತಾ ಟೂರ್ನಿಯ ಪಂದ್ಯಗಳು ಸಹ ಇದೇ ವೇಳೆ ನಡೆದವು.
ರೂಪೇಶ್ ಶಾ, ಸೌರವ್ ಕೊಠಾರಿ ರಾಷ್ಟ್ರೀಯ ಟೂರ್ನಿಗೆ ಅರ್ಹತೆ ಪಡೆದರೆ, ಅಲೋಕ್ ಕುಮಾರ್ ಹಾಗೂ ಪಂಕಜ್ ಅಡ್ವಾಣಿ ಅವರನ್ನು ನಾಮ ನಿರ್ದೇಶನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.