ADVERTISEMENT

ಸ್ಯಾಫ್: ಭಾರತದ ಎದುರಾಳಿ ಬಾಂಗ್ಲಾ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಕಠ್ಮಂಡು (ಪಿಟಿಐ): ಮೊದಲ ಪಂದ್ಯದಲ್ಲಿ ದೊರೆತ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗ 1-0 ಗೋಲಿನಿಂದ ಪಾಕಿಸ್ತಾನ ವಿರುದ್ಧ ಪ್ರಯಾಸದ ಜಯ ಪಡೆದಿತ್ತು. ಆದರೆ ತಂಡ ಚೇತರಿಕೆಯ ಪ್ರದರ್ಶನ ನೀಡಿರಲಿಲ್ಲ. ಪಾಕ್ ನೀಡಿದ `ಉಡುಗೊರೆ' ಗೋಲಿನಿಂದಾಗಿ ಭಾರತ ಪೂರ್ಣ ಪಾಯಿಂಟ್ ಗಳಿಸಿತ್ತು.

ಈ ಕಾರಣ ಬಾಂಗ್ಲಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಭಾರತದ ಮುಂದಿದೆ. ಪಾಕ್ ವಿರುದ್ಧ ತಂಡ ನೀಡಿದ ಪ್ರದರ್ಶನ ತೃಪ್ತಿ ನೀಡಿಲ್ಲ ಎಂದು ಕೋಚ್ ವಿಮ್ ಕೊವರ್‌ಮನ್ಸ್ ತಿಳಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾ ಇದುವರೆಗೆ ಒಟ್ಟು 22 ಸಲ ಎದುರಾಗಿವೆ. ಇದರಲ್ಲಿ ಭಾರತ 11ರಲ್ಲಿ ಹಾಗೂ ಬಾಂಗ್ಲಾ ಮೂರರಲ್ಲಿ ಜಯ ಪಡೆದಿವೆ. ಇತರ ಎಂಟು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.