ADVERTISEMENT

ಹಾಕಿ: ಭಾರತಕ್ಕೆ ಮಿಶ್ರಫಲ

ಪಿಟಿಐ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
ಹಾಕಿ: ಭಾರತಕ್ಕೆ ಮಿಶ್ರಫಲ
ಹಾಕಿ: ಭಾರತಕ್ಕೆ ಮಿಶ್ರಫಲ   

ಡಸೆಲ್‌ಡರ್ಫ್‌, ಜರ್ಮನಿ: ಭಾರತದ ಪುರುಷರ ಹಾಕಿ ತಂಡದರು ಶನಿವಾರ ಇಲ್ಲಿ ನಡೆಯುತ್ತಿರುವ ಮೂರು ರಾಷ್ಟ್ರಗಳ ಆಹ್ವಾನಿತ ಟೂರ್ನಿಯಲ್ಲಿ ಮಿಶ್ರಫಲ ಉಂಡರು.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ಎದುರು 1–2 ಅಂತರದಲ್ಲಿ ನಿರಾಸೆ ಅನುಭವಿಸಿದ ತಂಡ ಶನಿವಾರದ ಪಂದ್ಯದಲ್ಲಿ ಜರ್ಮನಿ ವಿರುದ್ಧ 2–2 ಗೋಲುಗಳಿಂದ ಡ್ರಾ ಸಾಧಿಸಿತು.

ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳಿಂದ ಒಂದೂ ಗೋಲು ದಾಖಲಾಗಲಿಲ್ಲ. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಶುಭಾರಂಭ ಮಾಡಿತು. ಹರ್ಮನ್‌ಪ್ರೀತ್ ಕೌರ್ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾ ಶದಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಡ್ರ್ಯಾಗ್‌ಫ್ಲಿಕ್ ಪರಿಣತ ಆಟಗಾರ ಅಮೋಘವಾಗಿ ಗೋಲು ದಾಖಲಿಸಿ ಮಿಂಚಿದರು.

ADVERTISEMENT

ಭಾರತ ತಂಡ ಅಂತಿಮ ಕ್ವಾರ್ಟರ್‌ನಲ್ಲಿ ಎರಡು ಗೋಲು ಬಿಟ್ಟುಕೊಟ್ಟಿತು. ಇದರಿಂದ ಪ್ರವಾಸಿ ತಂಡಕ್ಕೆ ಸೋಲು ಎದುರಾಯಿತು. ಬೆಲ್ಜಿಯಂ 52 ಹಾಗೂ 55ನೇ ನಿಮಿಷದಲ್ಲಿ ಗೋಲು ಪಡೆಯಿತು. ಈ ತಂಡದ ಸೆಡ್ರಿಕ್ ಚಾರ್ಲಿಯರ್‌ ಹಾಗೂ ಟಾಮ್ ಬೂನ್‌ ಗೋಲು ದಾಖಲಿಸಿದರು.

ಬೆಲ್ಜಿಯಂ ತನ್ನ ಮೊದಲ ಪಂದ್ಯದಲ್ಲಿ ಗುರುವಾರ 5–2 ಗೋಲುಗಳಲ್ಲಿ ಜರ್ಮನಿ ಎದುರು ಗೆಲುವು ದಾಖಲಿಸಿತ್ತು. ಇದೇ ಉತ್ಸಾಹದಲ್ಲಿದ್ದ ತಂಡದ ಆಟಗಾರರು ದ್ವಿತೀಯಾರ್ಧದ ವೇಳೆಗೆ ಆಕ್ರಮಣಕಾರಿಯಾಗಿ ಆಡಿದರು.

19ನೇ ನಿಮಿಷದಲ್ಲಿ ಭಾರತ ಗೋಲು ದಾಖಲಿಸಿದ ಬಳಿಕ ಬೆಲ್ಜಿಯಂ ತನ್ನ ರಕ್ಷಣಾ ತಂತ್ರಗಳನ್ನು ಬದಲಾವಣೆ ಮಾಡಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಭಾರತ ಇನ್ನೊಂದು ಪೆನಾಲ್ಟಿ ಅವಕಾಶ ಪಡೆದಿತ್ತು. ಆದರೆ ರಮಣದೀಪ್ ಸಿಂಗ್‌ ನೀಡಿದ ಪಾಸ್‌ನಲ್ಲಿ ಹರ್ಮನ್‌ಪ್ರೀತ್ ಗೋಲು ಗಳಿಸುವಲ್ಲಿ ಎಡವಿದರು.

ಬೆಲ್ಜಿಯಂ ಗೋಲ್‌ಕೀಪರ್ ಜೆರೆಮಿ ಗುಕ್ಯಾಸೊಫ್‌ ಅತ್ಯುತ್ತಮವಾಗಿ ಗೋಲು ತಡೆದರು. ಕೋಚ್‌ ರೋಲಂಟ್ ಓಲ್ಟ ಮಸ್ ತಂಡದಲ್ಲಿ ಕೆಲವು ಬದಲಾವಣೆ ಗಳನ್ನು ಮಾಡಿದರೂ ಅಂತಿಮ ವೇಳೆಯಲ್ಲಿ ಭಾರತಕ್ಕೆ ಗೋಲು ಗಳಿಸಲು ಆಗಲಿಲ್ಲ.

ಮೂರನೇ ಕ್ವಾರ್ಟರ್‌ನಲ್ಲಿ ಭಾರತಕ್ಕೆ ನಾಲ್ಕನೇ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತ್ತು. ಆದರೆ ಈ ಪ್ರಯತ್ನದಲ್ಲೂ ಹರ್ಮನ್‌ಪ್ರೀತ್ ಗೋಲು ಗಳಿಸಲಿಲ್ಲ. ಈ ವೇಳೆ ಬೆಲ್ಜಿಯಂ ಡಿಫೆಂಡರ್‌ಗಳು ಉತ್ತಮ ಸಾಮರ್ಥ್ಯ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.