ADVERTISEMENT

ಹಾಕಿ: ಆರ್‌ಡಬ್ಲ್ಯುಎಫ್ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಆರ್‌ಡಬ್ಲ್ಯುಎಫ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್ ತಂಡ 5-2 ಗೋಲುಗಳಿಂದ ಆರ್‌ಬಿಐ ತಂಡವನ್ನು ಮಣಿಸಿತು. ಮೊಹಮ್ಮದ್ ಇಮ್ರಾನ್ (6ನೇ ನಿಮಿಷ), ಚೇತನ್ ಕೃಷ್ಣ (11), ಜಿತಿನ್ ಕಾಳಪ್ಪ (26), ಜಯರಾಜ್ (33) ಮತ್ತು ಪ್ರದೀಪ್ (50) ಅವರು ಆರ್‌ಡಬ್ಲ್ಯುಎಫ್ ಪರ ಗೋಲು ಗಳಿಸಿದರು.

ಫ್ರೆಡ್ರಿಕ್ ದಾಸ್ (29) ಮತ್ತು ಗೀಲಾನಿ (31) ಚೆಂಡನ್ನು ಗುರಿಸೇರಿಸಿ ಆರ್‌ಬಿಐ ತಂಡದ ಸೋಲಿನ ಅಂತರ ತಗ್ಗಿಸಿದರು.

ಬಿಎಸ್‌ಎನ್‌ಎಲ್ ಮತ್ತು ಎಂಇಜಿ ಬಾಯ್ಸ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು. ಮೊಹಮ್ಮದ್ ನಜೀಮ್ ಬೆಪಾರಿ 10ನೇ ನಿಮಿಷದಲ್ಲಿ ಬಿಎಸ್‌ಎನ್‌ಎಲ್ ತಂಡಕ್ಕೆ ಮೇಲುಗೈ ತಂದಿತ್ತರು.

ಮರುಹೋರಾಟ ನಡೆಸಿದ ಎಂಇಜಿ ಬಾಯ್ಸ 18ನೇ ನಿಮಿಷದಲ್ಲಿ ಸಮಬಲದ ಗೋಲು ಗಳಿಸಿತು. ಎಂ.ಎಸ್. ಬೋಪಣ್ಣ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಎರಡನೇ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ.

ಗುರುವಾರ ನಡೆಯುವ ಪಂದ್ಯದಲ್ಲಿ ಸಿನರ್ಜಿ ಸ್ಪೋರ್ಟ್ಸ್ ಕ್ಲಬ್ ಮತ್ತು ಎಂಇಜಿ ಬಾಯ್ಸ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.