ಬೆಂಗಳೂರು: ವಾಸೀಮ್ ಫಹಾದ್ ಹಾಗೂ ಎಸ್.ಹರ್ಷ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಸೇಂಟ್ ಜೋಸೆಪ್ ಇಂಡಿಯನ್ ಹೈಸ್ಕೂಲ್ (ಎಸ್‌ಜೆಐಎಚ್‌ಎಸ್) ತಂಡದವರು ಇಲ್ಲಿ ನಡೆಯುತ್ತಿರುವ `ಹಾಕಿ ಕರ್ನಾಟಕ' ಆಶ್ರಯದ ಎರಡನೇ ಅಂತರ ಶಾಲಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಸ್‌ಜೆಐಎಚ್‌ಎಸ್ ತಂಡ 4-1 ಗೋಲುಗಳಿಂದ ಸೇಂಟ್ ಜಾನ್ಸ್ ಹೈಸ್ಕೂಲ್ ತಂಡವನ್ನು ಮಣಿಸಿತು. ವಿಜಯಿ ತಂಡದ ಫಹಾದ್ (7ನೇ ಹಾಗೂ 20ನೇ ನಿಮಿಷ), ಹರ್ಷ (19ನೇ ಹಾಗೂ 30ನೇ ನಿಮಿಷ) ಗೋಲು ಗಳಿಸಿದರು. ಸೇಂಟ್ ಜಾನ್ಸ್ ತಂಡದ ಇಮಾದ್ 10ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.
ಮತ್ತೊಂದು ಪಂದ್ಯದಲ್ಲಿ ಮರಿಯನಿಕೇತನ ತಂಡ 3-0 ಗೋಲುಗಳಿಂದ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆ ತಂಡವನ್ನು ಸೋಲಿಸಿತು. ವಿಜಯಿ ತಂಡದ ಅರುಣ್ ಪ್ರಕಾಶ್ (2ನೇ ಹಾಗೂ 20ನೇ ನಿ.) ಮತ್ತು ನೊಯೆರಿಯೊ (27ನೇ ನಿ.) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.