ನವದೆಹಲಿ (ಪಿಟಿಐ): ಅನುಭವಿ ಆಟಗಾರರರಾದ ಕರ್ನಾಟಕದ ಎಸ್.ವಿ.ಸುನಿಲ್, ವಿ.ಆರ್.ರಘುನಾಥ್, ಯುವ ಆಟಗಾರರಾದ ಎಸ್.ಕೆ.ಉತ್ತಪ್ಪ ಹಾಗೂ ನಿತಿನ್ ತಿಮ್ಮಯ್ಯ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 34ನೇ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ ಹಾಗೂ ಲ್ಯಾಂಕೊ ಇಂಟರ್‌ನ್ಯಾಷನಲ್ ಸೂಪರ್ ಸರಣಿಗೆ ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಘುನಾಥ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಸರ್ದಾರ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಹಿರಿಯ ಆಟಗಾರರಾದ ಸಂದೀಪ್ ಸಿಂಗ್, ಭರತ್ ಚೆಟ್ರಿ, ಶಿವೇಂದ್ರ ಸಿಂಗ್ ಹಾಗೂ ಇಗ್ನೇಸ್ ಟರ್ಕಿ ಅವರನ್ನು ಕೈಬಿಡಲಾಗಿದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ತಂಡದಲ್ಲಿ ಒಟ್ಟು ಏಳು ಬದಲಾವಣೆ ಮಾಡಲಾಗಿದೆ.
ಕರ್ನಾಟಕದ ಎಂ.ಬಿ.ಅಯ್ಯಪ್ಪ, ಪ್ರಧಾನ್ ಸೋಮಣ್ಣ ಹಾಗೂ ಪಿ.ಎಲ್.ತಿಮ್ಮಣ್ಣ ಕಾಯ್ದಿರಿಸಿದ ಆಟಗಾರರಾಗಿದ್ದಾರೆ.
ಆಯ್ಕೆ ಸಮಿತಿ ಸದಸ್ಯರಾದ ಕರ್ನಲ್ ಬಲ್ಬೀರ್ ಸಿಂಗ್, ಬಿ.ಪಿ.ಗೋವಿಂದ, ತೊಯ್ಬಾ ಸಿಂಗ್, ಸರ್ಕಾರದ ವೀಕ್ಷಕ ಹರ್ಬಿಂದರ್ ಸಿಂಗ್ ಹಾಗೂ ಮುಖ್ಯ ಕೋಚ್ ಮೈಕಲ್ ನಾಬ್ಸ್ ಸಮ್ಮುಖದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ನವೆಂಬರ್ 22ರಿಂದ 25ರವರೆಗೆ ಪರ್ತ್‌ನಲ್ಲಿ ಲ್ಯಾಂಕೊ ಅಂತರರಾಷ್ಟ್ರೀಯ ಸೂಪರ್ ಸರಣಿ ಟೂರ್ನಿ ನಡೆಯಲಿದೆ. ಡಿಸೆಂಬರ್ 1ರಿಂದ 9ವರೆಗೆ ಮೆಲ್ಬರ್ನ್‌ನಲ್ಲಿ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ ಜರುಗಲಿದೆ.
ತಂಡ ಇಂತಿದೆ:
ಗೋಲ್ ಕೀಪರ್: ಪಿ.ಆರ್.ಶ್ರಿಜೇಶ್, ಪಿ.ಟಿ.ರಾವ್
ಫುಲ್ ಬ್ಯಾಕ್ಸ್: ವಿ.ಆರ್.ರಘುನಾಥ್ (ಉಪನಾಯಕ), ರೂಪಿಂದರ್‌ಪಾಲ್ ಸಿಂಗ್, ಹರ್ಬಿರ್ ಸಿಂಗ್.
ಹಾಫ್ ಬ್ಯಾಕ್ಸ್: ಸರ್ದಾರ್ ಸಿಂಗ್ (ನಾಯಕ), ಕೊಥಾಜಿತ್ ಸಿಂಗ್, ಬಿರೇಂದ್ರ ಲಾಕ್ರಾ, ಮನ್‌ಪ್ರೀತ್ ಸಿಂಗ್, ಗುರ್ಮೇಲ್ ಸಿಂಗ್.
ಫಾರ್ವರ್ಡ್ಸ್: ಎಸ್.ವಿ.ಸುನಿಲ್, ಗುರ್ವಿಂದರ್ ಸಿಂಗ ಚಾಂಡಿ, ದನಿಶ್ ಮುಜ್ತಾಬಾ, ಎಸ್.ಕೆ.ಉತ್ತಪ್ಪ, ನಿತಿನ್ ತಿಮ್ಮಯ್ಯ, ಯುವರಾಜ್ ವಾಲ್ಮೀಕಿ, ಧರಮ್‌ವೀರ್ ಸಿಂಗ್, ಆಕಾಶ್‌ದೀಪ್ ಸಿಂಗ್.
ಕಾಯ್ದಿರಿಸಿದ ಆಟಗಾರರು: ಶ್ರೀನಿವಾಸ್ ರಾವ್ (ಗೋಲ್ ಕೀಪರ್), ಅಮಿತ್ ರೋಹಿದಾಸ್ (ಡಿಫೆಂಡರ್), ಎಂ.ಬಿ.ಅಯ್ಯಪ್ಪ (ಹಾಫ್‌ಬ್ಯಾಕ್ಸ್), ಚಿಂಗ್ಲೆನ್‌ಸನಾ ಸಿಂಗ್ (ಫಾರ್ವರ್ಡ್), ಪ್ರಧಾನ್ ಸೋಮಣ್ಣ (ಫಾರ್ವರ್ಡ್), ಪಿ.ಎಲ್.ತಿಮ್ಮಣ್ಣ (ಫಾರ್ವರ್ಡ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.