ADVERTISEMENT

ಹಾಕಿ: ಕೂಡಿಗೆ ಶಾಲೆಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ವೈಇಎಸ್‌ಡಿ ‘ಎ’ ತಂಡದ ಚುರುಕಿನ ಆಟದ ಮುಂದೆ ಮಂಕಾದ ಕೂಡಿಗೆ ಸರ್ಕಾರಿ ಶಾಲೆ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯು­ತ್ತಿರುವ ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ ಸೋಲು ಕಂಡಿತು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯ­ದಲ್ಲಿ ವೈಇಎಸ್‌ಡಿ 8–0 ಗೋಲು­ಗಳಿಂದ ಕೂಡಿಗೆ ತಂಡವನ್ನು ಮಣಿಸಿತು.

ವಿಜಯೀ ತಂಡದ ಪಿ.ಪಿ. ರಶ್ಮಿ 4ನೇ ನಿಮಿಷದಲ್ಲಿ ಗೋಲಿನ ಖಾತೆ ಆರಂಭಿಸಿ 9ನೇ ನಿಮಿಷದಲ್ಲಿ ಇನ್ನೊಂದು ಗೋಲು ಕಲೆ ಹಾಕಿದರು. ಈ ತಂಡದ ಇನ್ನುಳಿದ ಗೋಲುಗಳನ್ನು ಎಸ್‌.ಪಿ. ಕಾವ್ಯಶ್ರೀ (14 ಹಾಗೂ 42ನೇ ನಿಮಿಷ), ಬಿ.ಪಿ. ನಂದಿನಿ (15, 48ನೇ ನಿ.), ಎ.ಆರ್‌. ತನುಶ್ರೀ (24ನೇ ನಿ.), ಎಚ್‌.ಪಿ. ಸಂಧ್ಯಾ (37ನೇ ನಿ.) ತಂದಿತ್ತರು.

ದಿನದ ಇನ್ನೊಂದು ಪಂದ್ಯದಲ್ಲಿ ಆರ್‌ಡಿಟಿ 2–0 ಗೋಲುಗಳಿಂದ ಹುಬ್ಬಳ್ಳಿಯ ವಾಸು ಹಾಕಿ ಕ್ಲಬ್‌ ತಂಡವನ್ನು ಸೋಲಿಸಿತು.

12 ಮತ್ತು 49ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಕಲೆ ಹಾಕಿದ ಮಹಾಲಕ್ಷ್ಮಿ ಆರ್‌ಡಿಟಿ ತಂಡದ ಗೆಲುವಿನ ರೂವಾರಿ ಎನಿಸಿದರು.

ಶುಕ್ರವಾರದ ಪಂದ್ಯಗಳು: ಆರ್‌ಡಿಟಿ–ಬಿಸಿವೈಎ (ಮಧ್ಯಾಹ್ನ 2ಕ್ಕೆ), ಭಾರತ ಕ್ರೀಡಾ ಪ್ರಾಧಿಕಾರ ‘ಎ’– ವೈಇಎಸ್‌ಡಿಎ ‘ಬಿ‘ (3ಕ್ಕೆ) ಮತ್ತು ವೈಇಎಸ್‌ಡಿ–ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ (ಸಂಜೆ 4ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.