ADVERTISEMENT

ಹಾಕಿ: ಡಿವೈಎಸ್‌ಎಸ್-ಐಟಿಐ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ಬೆಂಗಳೂರು: ಸಮಬಲದ ಆಟ ಪ್ರದರ್ಶಿಸಿದ ಡಿವೈಎಸ್‌ಎಸ್ `ಎ~ ಹಾಗೂ ಐಟಿಐ ತಂಡಗಳ ನಡುವಿನ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯವು  ಡ್ರಾ ದಲ್ಲಿ ಅಂತ್ಯ ಕಂಡಿತು.

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ 2-2ಗೋಲುಗಳನ್ನು ಗಳಿಸಿದವು.

ಐಟಿಐ ತಂಡದ ಜಗನ್ನಾಥ್ 7 ಮತ್ತು 32ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗುವಂತೆ ಮಾಡಿದರು. ಆದರೆ ಡಿವೈಎಸ್‌ಎಸ್ `ಎ~ ತಂಡ ದ್ವಿತೀಯಾರ್ಧದಲ್ಲಿ ಚುರುಕಿನ ಆಟವಾಡಿ ಐಟಿಐ ತಂಡದ ಗೆಲುವಿಗೆ ಅಡ್ಡಿಯಾಯಿತು. ಡಿವೈಎಸ್‌ಎಸ್ ತಂಡದ ಕುಶ ಹಾಗೂ ಸಚಿನ್ ಮಲ್ಲಾಡಿ ತಲಾ ಒಂದು ಗೋಲು ತಂದಿತ್ತು ಸಮಬಲ ಸಾಧಿಸುವಂತೆ ನೋಡಿಕೊಂಡರು. ಅಷ್ಟೇ ಅಲ್ಲ ಎದುರಾಳಿ ತಂಡ ಮತ್ತೆ ಗೋಲು ಗಳಿಸಿದಂತೆ ಎಚ್ಚರಿಕೆ ವಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.