ADVERTISEMENT

ಹಾಕಿ: ಧಾರವಾಡ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಹಾಕಿ: ಧಾರವಾಡ ತಂಡಕ್ಕೆ ಗೆಲುವು
ಬೆಂಗಳೂರು
: ಕೌಶಿಕ್ ತಂದಿತ್ತ ಮೂರು ಗೋಲುಗಳ ನೆರವಿನಿಂದ ಹಾಸನ ತಂಡದವರು ಇಲ್ಲಿ ನಡೆಯುತ್ತಿರುವ `ಹಾಕಿ ಕರ್ನಾಟಕ~ ಆಶ್ರಯದ ಅಂತರ ಜಿಲ್ಲಾ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಧಾರವಾಡ 8-0 ಗೋಲುಗಳಿಂದ ಚಾಮರಾಜನಗರ ಜಿಲ್ಲೆ ತಂಡವನ್ನು ಪರಾಭವಗೊಳಿಸಿತು.

 ವಿಜಯಿ ತಂಡದ ವಿನಯ್ (12ನೇ ನಿ.), ದೇವಯ್ಯ (33ನೇ ನಿ.), ಜೀವನ್ (34ನೇ ನಿ.), ಕೌಶಿಕ್ (8ನೇ ನಿ, 41ನೇ ನಿ, 50ನೇ ನಿ.), ಸುನಿಲ್ (42ನೇ ನಿ.), ಸನತ್ (42ನೇ ನಿ.) ಹಾಗೂ ಈಶ್ವರ್ (49ನೇ ನಿ.) ಗೋಲು ತಂದಿತ್ತರು.ಇನ್ನೊಂದು  ಪಂದ್ಯದಲ್ಲಿ ಮಂಗಳೂರು ತಂಡ 2-0 ಗೋಲುಗಳಿಂದ ಬಾಗಲಕೋಟೆ ಎದುರು ಗೆದ್ದಿತು.

ಟೆನಿಸ್: ನಿಕ್ಷೇಪ್ ಶುಭಾರಂಭ
ಚೆನ್ನೈ (ಪಿಟಿಐ):
ಅಗ್ರ ಶ್ರೇಯಾಂಕದ ಕರ್ನಾಟಕದ ಬಿ.ಆರ್. ನಿಕ್ಷೇಪ್ ಇಲ್ಲಿ ಆರಂಭವಾದ ಅಡಿಡಾಸ್ ಸಬ್ ಜೂನಿಯರ್ ರಾಷ್ಟ್ರೀಯ ಟೆನಿಸ್ ಟೂರ್ನಿಯ 14 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು ಸೋಮವಾರ ನಿಕ್ಷೇಪ್ 6-2, 6-3ರಲ್ಲಿ ಆಂಧ್ರಪ್ರದೇಶದ ಅರ್ಜುನ್ ಪಟ್ನಾಯಿ ಎದುರು ಗೆಲುವು ಪಡೆದರು.

ಟಿಟಿ: ರಕ್ಷಿತ್‌ಗೆ ಪ್ರಶಸ್ತಿ~

ಬೆಂಗಳೂರು: ಬಿ. ರಕ್ಷಿತ್ ಅವರು ಕರ್ನಾಟಕ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ `ಎಲ್‌ಐಸಿ ಕಪ್~ ಗೆದ್ದುಕೊಂಡರು.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ರಕ್ಷಿತ್ 14-12, 9-11, 11-6, 12-14, 12-10ರಲ್ಲಿ ಸುಚಿತ್ ಪಿ. ಶೆಣೈ ಅವರನ್ನು ಸೋಲಿಸಿದರು. ಕೆಡೆಟ್ ಬಾಲಕರ ವಿಭಾಗದ ಫೈನಲ್‌ನಲ್ಲಿ ದಕ್ಷಾ ಕೆ. ತೆಲಾಂಗ್ 12-10, 12-10, 7-11, 11-7ರಲ್ಲಿ ಕೆ.ಎನ್. ಪ್ರೀತಮ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದರು. ಸಬ್ ಜೂನಿಯರ್ ಬಾಲಕಿಯರ ವಿಭಾಗದ ಅಂತಿಮ ಘಟ್ಟದ ಪಂದ್ಯದಲ್ಲಿ ಅರ್ಚನಾ ಕಾಮತ್ 10-12, 3-11, 13-11, 12-10, 11-5ರಲ್ಲಿ ಎಂ.ವಿ. ಸ್ಫೂರ್ತಿ ಅವರನ್ನು ಮಣಿಸಿ ಚಾಂಪಿಯನ್ ಎನಿಸಿಕೊಂಡರು.

ಬಾಲಕಿಯರ ಕೆಡೆಟ್ ವಿಭಾಗದ ಫೈನಲ್ ಪಂದ್ಯದಲ್ಲಿ ಆಯಷ್ ಸಿದ್ಧಕಿ 7-11. 11-4, 11-3, 16-14ರಲ್ಲಿ ಆದಿತಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.