
ಪ್ರಜಾವಾಣಿ ವಾರ್ತೆಬೆಂಗಳೂರು: ಸಿನರ್ಜಿ ಸ್ಪೋರ್ಟ್ಸ್ ಕ್ಲಬ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸಿನರ್ಜಿ ಕ್ಲಬ್ 1-0 ರಲ್ಲಿ ಆರ್‌ಬಿಐ ವಿರುದ್ಧ ಜಯ ಪಡೆಯಿತು. ಶೈಲೇಶ್ 55ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದಿತ್ತರು.
ದಿನದ ಮತ್ತೊಂದು ಪಂದ್ಯದಲ್ಲಿ ಐಟಿಐ 2-1 ಗೋಲುಗಳಿಂದ ಬಿಇಎಲ್ ತಂಡವನ್ನು ಮಣಿಸಿತು. ಕಾರ್ಯಪ್ಪ (9ನೇ ನಿಮಿಷ) ಮತ್ತು ಸೋಮಯ್ಯ (58ನೇ ನಿ.) ಗೋಲು ಗಳಿಸಿ ಐಟಿಐ ಗೆಲುವಿಗೆ ಕಾರಣರಾದರು. ಬಿಇಎಲ್ ತಂಡದ ಏಕೈಕ ಗೋಲನ್ನು ಸುಬ್ಬಯ್ಯ (47ನೇ ನಿ.) ತಂದಿತ್ತರು. ಮಂಗಳವಾರ ನಡೆಯುವ ಪಂದ್ಯದಲ್ಲಿ ಆರ್‌ಬಿಐ ಮತ್ತು ಕೂರ್ಗ್ ಬ್ಲೂಸ್ ತಂಡಗಳು ಎದುರಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.