ನವದೆಹಲಿ (ಪಿಟಿಐ): ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತದ ಮೇರಿ ಕೋಮ್ ಸಾಧನೆ ಶ್ರೇಷ್ಠ . ಅವರ ಸಾಹಸ ಕಾರ್ಯವನ್ನು ನಾನು ಗಮನಿಸು ತ್ತಲೇ ಇದ್ದೇನೆ ಎಂದು ಅಮೆರಿಕಾದ ಬಾಕ್ಸಿಂಗ್ ದಿಗ್ಗಜ ಎವಾಂಡರ್ ಹೋಲಿ ಫೀಲ್ಡ್ ತಿಳಿಸಿದ್ದಾರೆ.
‘ಭಾರತದ ಯುವತಿಯೊಬ್ಬಳು ಅಮೆರಿಕಾದ ಆಟ ಎನಿಸಿಕೊಂಡಿರುವ ಬಾಕ್ಸಿಂಗ್ ನಲ್ಲಿ ಹೇಗೆ ಎತ್ತರದ ಸಾಧನೆ ಮಾಡಿದರು ಎಂಬುದನ್ನು ಕಲ್ಪಿಸಿಕೊಂಡರೆ ನಿಜಕ್ಕೂ ಮೇರಿ ಶ್ರೇಷ್ಠ ಎಂಬ ಭಾವನೆ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
1984 ರ ಒಲಿಂಪಿಕ್ಸ್ ಹೆವಿವೇಯ್ಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುವ ಹೋಲಿ ಫೀಲ್ಡ್ ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಕ್ರಿಸ್‌ಮಸ್ ಪೂರ್ವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದ ವೇಳೆ ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.