ADVERTISEMENT

‘ಕ್ರಿಕೆಟ್‌ನಿಂದ ಭಾರತ–ಪಾಕ್ ಬಾಂಧವ್ಯ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಮೀರ್‌ಪುರ (ಪಿಟಿಐ): ‘ಭಾರತ ಹಾಗೂ ಪಾಕಿಸ್ತಾನ ನಡುವೆ ಹೆಚ್ಚು ಹೆಚ್ಚು ಕ್ರಿಕೆಟ್‌ ನಡೆಯಬೇಕು. ಕ್ರಿಕೆಟ್‌ ನಿಂದಾಗಿ ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಯಾಗ ಲಿದೆ’ ಎಂದು ಪಾಕಿಸ್ತಾನ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಶಾಹಿದ್‌ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

‘ಭಾರತದಲ್ಲಿ ಕ್ರಿಕೆಟ್‌ ಆಡುತ್ತಾ ನಾನು ತುಂಬಾ ಖುಷಿ ಪಟ್ಟಿದ್ದೇನೆ. ಬೇರೆ ಯಾವುದೇ ದೇಶದಲ್ಲಿ ನನಗೆ ಇಷ್ಟೊಂದು ಖುಷಿ ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ನೆರೆಹೊರೆಯವರು. ನಮ್ಮ ನಡುವಿನ ಬಾಂಧವ್ಯ ಚೆನ್ನಾಗಿರಬೇಕು. ಆ ಸಂಬಂಧ ಕ್ರಿಕೆಟ್‌ನಿಂದ ಮತ್ತಷ್ಟು ಗಟ್ಟಿಯಾಗಲಿದೆ’ ಎಂದು ಅವರು ನುಡಿದಿದ್ದಾರೆ.

‘ಪ್ರತಿ ಹಂತದಲ್ಲೂ ಭಾರತವನ್ನು ಪಾಕ್‌ ಕ್ರಿಕೆಟ್‌ ಪರಿವಾರ ಬೆಂಬಲಿಸಿದೆ. ಬೆದರಿಕೆ ಇದ್ದರೂ ನಾವು ಭಾರತಕ್ಕೆ ಹೋಗಿ ಕ್ರಿಕೆಟ್‌ ಆಡಿದ್ದೇವೆ. ಕ್ರೀಡೆಯಿಂದ ಗೆಳೆತನ ಮತ್ತಷ್ಟು ಉತ್ತಮಗೊಳ್ಳುತ್ತದೆ’ ಎಂದಿದ್ದಾರೆ.

ಐಪಿಎಲ್‌ನಲ್ಲಿ ಪಾಕ್‌ ಆಟಗಾರರು ಆಡುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ಏಕೆ ಕೇಳುತ್ತೀರಿ, ಭಾರತ ಸರ್ಕಾರದ ಬಳಿ ಈ ಪ್ರಶ್ನೆ ಕೇಳಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.