ADVERTISEMENT

14ರಿಂದ ದಕ್ಷಿಣ ವಲಯ ಆಟ್ಯಾಪಾಟ್ಯಾ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಆಟ್ಯಾಪಾಟ್ಯಾ ಸಂಸ್ಥೆ ಆಶ್ರಯದಲ್ಲಿ ದಕ್ಷಿಣ ವಲಯ ಪುರುಷ ಹಾಗೂ ಮಹಿಳೆಯರ ಎರಡನೇ ಆಟ್ಯಾಪಾಟ್ಯಾ ಚಾಂಪಿಯನ್‌ಷಿಪ್‌ ಇದೇ ತಿಂಗಳ 14ರಿಂದ 16ರವರೆಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.

ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳ ರಾಜ್ಯಗಳ ಸ್ಪರ್ಧಿಗಳ ಜೊತೆಗೆ ಆತಿಥೇಯ ಕರ್ನಾಟಕ ತಂಡದ ಪುರುಷ ಹಾಗೂ ಮಹಿಳೆಯರ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.

ತೀರ್ಪುಗಾರರ ಪರೀಕ್ಷೆ 13ರಂದು:  ರಾಜ್ಯಮಟ್ಟದ ಆಟ್ಯಾ–ಪಾಟ್ಯಾ ತೀರ್ಪುಗಾರರ ಪರೀಕ್ಷೆಯು ಇದೇ 14 ಹಾಗೂ 15ರಂದು ನರಗುಂದದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.

ಆಸಕ್ತರು ಹೆಸರು ನೋಂದಾಯಿಸಲು ತರಬೇತುದಾರರಾದ ಲಕ್ಷ್ಮಣ ಲಮಾಣಿ (9448863242)  ಅವರನ್ನು ಸಂಪರ್ಕಿಸಬಹುದು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.