ADVERTISEMENT

39ರ ಸಂಭ್ರಮದಲ್ಲಿ ಚಾಂಪಿಯನ್ ಸಚಿನ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಮುಂಬೈ: ಅದೇ ಉತ್ಸಾಹ, ಅಷ್ಟೇ ತುಡಿತ, ಕುಗ್ಗದ ಶಕ್ತಿ, ತೀರದ ಹಸಿವು. ಅದು ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್. `ಕ್ರಿಕೆಟ್ ದೇವರು~ ಎಂದು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ತೆಂಡೂಲ್ಕರ್ ಮಂಗಳವಾರ 39ನೇ ವಯಸ್ಸಿಗೆ ಕಾಲಿರಿಸಲಿದ್ದಾರೆ. 

 ಕಳೆದ ತಿಂಗಳು ಢಾಕಾದಲ್ಲಿ ಶತಕಗಳ ಶತಕದ ಸಾಧನೆ ಮಾಡಿದ್ದ ಸಚಿನ್ ಕ್ರಿಕೆಟ್ ವಿಷಯಕ್ಕೆ ಬಂದಾಗ 19ರ ಹರೆಯದ ಹುಡುಗನಿಗಿರುವಷ್ಟೇ ತುಡಿತ ಹೊಂದಿದ್ದಾರೆ. ಯುವಕರ ಆಟ ಎನಿಸಿರುವ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲೂ ಉತ್ಸಾಹದಿಂದ ಆಡುತ್ತಿರುವುದು ಅದಕ್ಕೆ ಸಾಕ್ಷಿ.

ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಐಪಿಎಲ್ ಪಂದ್ಯದಲ್ಲಿ ಆಡಲು ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ ಮೊಹಾಲಿಗೆ ತೆರಳಿದೆ. ಹಾಗಾಗಿ ಸಚಿನ್ ಮೊಹಾಲಿಯಲ್ಲಿ ಸಹ ಆಟಗಾರರೊಂದಿಗೆ ಜನ್ಮದಿನ ಆಚರಿಸಿಕೊಳ್ಳುವ ನಿರೀಕ್ಷೆ ಇದೆ. ಮಾರನೆ ದಿನ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.