ADVERTISEMENT

50 ಕಿ.ಮೀ ವಿಭಾಗದಲ್ಲಿ ಕೈರನ್‌ಗೆ ಮೊದಲ ಸ್ಥಾನ

ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 20:03 IST
Last Updated 7 ಅಕ್ಟೋಬರ್ 2017, 20:03 IST
50 ಕಿ.ಮೀ ಓಟದಲ್ಲಿ ಮೊದಲ ಸ್ಥಾನ ಪಡೆದ ಕೈರನ್‌ (ಬಿಳಿ ಟಿಶರ್ಟ್‌), ದ್ವಿತೀಯ ಸ್ಥಾನ ಪಡೆದ ಸಂದೀಪ್‌ಕುಮಾರ್‌ (ಕೇಸರಿ ಟಿಶರ್ಟ್‌) ಹಾಗೂ ಕುಲಭೂಷಣ್‌ ಸೂರ್ಯವಂಶಿ. ಪ್ರಜಾವಾಣಿ ಚಿತ್ರ– ಎ.ಎನ್‌.ಮೂರ್ತಿ
50 ಕಿ.ಮೀ ಓಟದಲ್ಲಿ ಮೊದಲ ಸ್ಥಾನ ಪಡೆದ ಕೈರನ್‌ (ಬಿಳಿ ಟಿಶರ್ಟ್‌), ದ್ವಿತೀಯ ಸ್ಥಾನ ಪಡೆದ ಸಂದೀಪ್‌ಕುಮಾರ್‌ (ಕೇಸರಿ ಟಿಶರ್ಟ್‌) ಹಾಗೂ ಕುಲಭೂಷಣ್‌ ಸೂರ್ಯವಂಶಿ. ಪ್ರಜಾವಾಣಿ ಚಿತ್ರ– ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ನರಸಿಂಹರಾಜಪುರ ತಾಲ್ಲೂಕಿನ ಲಾಲ್‌ಬಾಗ್‌ ಎಸ್ಟೇಟ್‌ನಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರ ಥಾನ್ ಓಟ ಸ್ಪರ್ಧೆ ಶನಿವಾರ ಆರಂಭ ವಾಯಿತು. ಕಾಫಿ ಡೇ ಪ್ಲಾಂಟೇಷನ್ಸ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಬಿ.ಸಿ.ಚಿದಂಬರ್‌ ಚಾಲನೆ ನೀಡಿದರು.

50 ಕಿ.ಮೀ ವಿಭಾಗದಲ್ಲಿ ನಾಗ್ಪು ರದ ಕೈರನ್‌ ಅವರು ಮೊದಲ ಸ್ಥಾನ ಪಡೆದರು. ದ್ವಿತೀಯ ಸ್ಥಾನ ಗುಜರಾತಿನ ಸೂರತ್‌ನ ಸಂದೀಪ್‌ ಕುಮಾರ್‌ ಪಾಲಾಯಿತು. ಮಹಾ ರಾಷ್ಟ್ರದ ಔರಾದ್‌ನ ಕುಲಭೂಷಣ್‌ ಸೂರ್ಯವಂಶಿ ತೃತೀಯ ಸ್ಥಾನ ಪಡೆ ದರು. ಬೆಂಗಳೂರಿನ ಸುಮೀತ್‌ ನಾಲ್ಕನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಭಾಗವಹಿಸಿದ್ದ ಬೆಂಗಳೂರು ನಿವಾಸಿ 84 ವರ್ಷದ ಜಗನ್ನಾಥ್ ಗಮನ ಸೆಳೆದರು.

ಕೈರನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಈ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದು ರೋಚಕ ಅನುಭವ ಪಡೆದಿದ್ದೇನೆ. ಹಿತಕರ ವಾತಾವರಣ, ಮರಗಿಡಗಳ ಎಲೆಗಳ ತರ್ಪಣ, ಪಕ್ಷಿಗಳ ಕಲರವ, ಸ್ವಚ್ಛ–ಸುಂದರ ನಿಸರ್ಗ, ಮುದ ನೀಡಿತು. ಜಾಗತಿಕ ಮಟ್ಟದ ಓಟ ಸ್ಪರ್ಧೆಗಳಲ್ಲಿ ದಾಖಲೆ ಸೃಷ್ಟಿಸುವ ಮಹದಾಸೆ ಇದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.