ಬೆಂಗಳೂರು: ಡೇಗಾ ನಿಶ್ಚಲ್ (71 ರನ್) ಅವರ ಅರ್ಧಶತಕದ ಬಲದಿಂದ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಶ್ರಯದ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದರು. ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ (1) ತಂಡವನ್ನು ಈ ತಂಡ 13 ರನ್ಗಳಿಂದ ಸೋಲಿಸಿತು.
ಸಂಕ್ಷಿಪ್ತ ಸ್ಕೋರು
ಮೌಂಟ್ ಜಾಯ್ ಸಿಸಿ: 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 163 (ಡಿ. ನಿಶ್ಚಲ್ 71, ಬಿ.ಆರ್. ಶರತ್ 43, ಅಮನ್ ಖಾನ್ 13ಕ್ಕೆ3) ಸ್ವಸ್ತಿಕ್ ಯೂನಿಯನ್ ಸಿಸಿ(1): 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 150 (ಸಿ.ಎಂ. ಗೌತಮ್ 55, ಕೆ.ವಿ. ಸಿದ್ಧಾರ್ಥ್ 53, ದೀಪಕ್ ಚೌಗುಲೆ 19ಕ್ಕೆ3). ಫಲಿತಾಂಶ: ಮೌಂಟ್ ಜಾಯ್ ಕ್ಲಬ್ಗೆ 13 ರನ್ ಜಯ.
ಹಮ್ಮಂಡ್ಸ್ ಸಿಸಿ: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 125 (ಸೈಯದ್ ಆದಿಲ್ ಪಾಷಾ 36, ಶಿವ ವಿ. ನೀರಜ್ 25, ಬಿ. ಹರ್ಷ 10ಕ್ಕೆ3. ಯುವರಾಜ್ 20ಕ್ಕೆ3), ದೂರವಾಣಿ ಕ್ರಿಕೆಟರ್ಸ್ (1): 19.1 ಓವರ್ಗಳಲ್ಲಿ 4 ವಿಕೆಟ್ಗಳಿಗೆ 129 (ವಿಶ್ವಾಸ್ ಲಾಡ್ 35, ಯತೀಶಕುಮಾರ್ ಔಟಾಗದೆ 39, ಭುವನ್ 24ಕ್ಕೆ4) ಫಲಿತಾಂಶ: ದೂರವಾಣಿ ತಂಡಕ್ಕೆ 6 ವಿಕೆಟ್ ಜಯ.
ಸೋಷಿಯಲ್ ಕ್ರಿಕೆಟರ್ಸ್: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 207 (ಮೊಹಮ್ಮದ್ ತಹಾ 34, ರೋಹನ್ ಕದಂ 57, ದಿಕ್ಷಾಂಶು ನೇಗಿ 63, ಭಾವೇಶ್ ಗುಲೇಚಾ 32ಕ್ಕೆ2),
ಜವಾನ್ಸ್ ಸಿಸಿ: 19 ಓವರ್ಗಳಲ್ಲಿ 102 (ದಿನೇಶ್ ಬೋರವಂಕರ್ 25, ಝರೂರ್ ಫಾರೂಕಿ 23ಕ್ಕೆ2, ರಿತೇಶ್ ಭಟ್ಕಳ 26ಕ್ಕೆ2, ದಿಕ್ಷಾಂಶು ನೇಗಿ 7ಕ್ಕೆ3, ಕಿಶೋರ್ ಕಾಮತ್ 21ಕ್ಕೆ2), ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್ಗೆ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.