ADVERTISEMENT

ಅಂಧರ ವಿಶ್ವಕಪ್ ಕ್ರಿಕೆಟ್ ನಾಳೆಯಿಂದ

ಏಜೆನ್ಸೀಸ್
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ ಭಾರತ ಅಂಧರ ಕ್ರಿಕೆಟ್ ತಂಡದ ಆಟಗಾರರು ನವದೆಹಲಿಯಲ್ಲಿ ಹಿರಿಯ ಕ್ರಿಕೆಟಿಗ ಅಜಯ್‌ ಜಡೇಜ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು –ಪಿಟಿಐ ಚಿತ್ರ
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ ಭಾರತ ಅಂಧರ ಕ್ರಿಕೆಟ್ ತಂಡದ ಆಟಗಾರರು ನವದೆಹಲಿಯಲ್ಲಿ ಹಿರಿಯ ಕ್ರಿಕೆಟಿಗ ಅಜಯ್‌ ಜಡೇಜ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು –ಪಿಟಿಐ ಚಿತ್ರ   

ನವದೆಹಲಿ: ಅಂಧರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭ ಪಾಕಿಸ್ತಾನ ಮತ್ತು ಯುಎಇನಲ್ಲಿ ಭಾನುವಾರ ನಡೆಯಲಿದೆ. ಪಂದ್ಯಗಳು ಎಂಟರಂದು ಆರಂಭಗೊಳ್ಳಲಿದೆ.

ಭಾರತ ತಂಡದ ಮೊದಲ ಪಂದ್ಯ ಎಂಟರಂದು ನಡೆಯಲಿದೆ. ಪಾಕಿಸ್ತಾನದಲ್ಲಿ ಆಡಲು ಸರ್ಕಾರ ಅನುಮತಿ ನೀಡದ ಕಾರಣ ಭಾರತ ತಂಡದ ಎಲ್ಲ ಪಂದ್ಯಗಳನ್ನು ದುಬೈನ ಅಜ್ಮಾನ್‌ ಕ್ರೀಡಾಂಗಣದಲ್ಲಿ ಆಡಲಿದ್ದು ಶನಿವಾರ ಅಲ್ಲಿಗೆ ತೆರಳಿದೆ. ಭದ್ರತೆಯ ಕಾರಣದಿಂದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕೂಡ ಪಾಕಿಸ್ತಾನದಲ್ಲಿ ಆಡದೇ ಇರಲು ನಿರ್ಧರಿಸಿವೆ.

ಅಂಧರ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ವಿಷಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯ ಮೌನ ವಹಿಸಿದೆ ಎಂದು ದೂರಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದು ಬೇಸರದ ಸಂಗತಿ ಎಂದು ಹೇಳಿದೆ.

ADVERTISEMENT

ಏಳರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. 21ರಂದು ಟೂರ್ನಿ ಮುಕ್ತಾಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.