ಆಕ್ಲಂಡ್ (ಎಎಫ್‌ಪಿ): ಅನುಭವಿ ಆಟಗಾರ ಡೇವಿಡ್ ಫೆರರ್ ಎಟಿಪಿ ಆಕ್ಲಂಡ್ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಮೊದಲ ಸುತ್ತಿನ ಪಂದ್ಯದಲ್ಲಿ ಜಯದಾಖಲಿಸಿದ್ದಾರೆ.
ಫೆರರ್ 7–6, 6–4ರಲ್ಲಿ 17 ವರ್ಷದ ಜೂನಿಯರ್ ಆಟಗಾರ ವು ಯಿಬಿಂಗ್ ಅವರನ್ನು ಮಣಿಸಿದ್ದಾರೆ.
ಕೆನಡಾದ ಡೆನಿಸ್ ಶಪೊವಲೊವ್ 6–3, 6–2ರಲ್ಲಿ ಬ್ರೆಜಿಲ್‌ನ ದತ್ರಾ ಸಿಲ್ವಾ ಅವರಿಗೆ ಸೋಲುಣಿಸಿದ್ದಾರೆ. 56 ನಿಮಿಷದ ಪೈಪೋಟಿಯಲ್ಲಿ ಡೆನಿಸ್ ಮೇಲುಗೈ ಸಾಧಿಸಿದ್ದಾರೆ.
ಸ್ಪೇನ್‌ನ ಆಟಗಾರ ರಾಬರ್ಟೊ ಬೂಟಿಸ್ಟಾ ಅಗಸ್ಟ್ 6–2, 6–1ರಲ್ಲಿ ಮೈಕಲ್ ವೀನಸ್ ವಿರುದ್ಧ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.