ADVERTISEMENT

ಪಂಕಜ್ ಅಡ್ವಾಣಿಗೆ ‘ಡಬಲ್‌’ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ಪಂಕಜ್ ಅಡ್ವಾಣಿಗೆ ‘ಡಬಲ್‌’ ಭರವಸೆ
ಪಂಕಜ್ ಅಡ್ವಾಣಿಗೆ ‘ಡಬಲ್‌’ ಭರವಸೆ   

ಬೆಂಗಳೂರು: ಈ ಋತುವಿನಲ್ಲಿ ಅತ್ಯು ತ್ತಮ ಸಾಧನೆ ಮಾಡಿ ಗಮನ ಸೆಳೆದಿರುವ ಪಂಕಜ್ ಅಡ್ವಾಣಿ ಮತ್ತೊಮ್ಮೆ ಎರಡು ಕಿರೀಟಗಳನ್ನು ಮುಡಿಗೇರಿಸುವ ಭರವಸೆಯಲ್ಲಿದ್ದಾರೆ.

ಮಂಗಳವಾರ ಇಲ್ಲಿನ ಕೆಎಸ್‌ಬಿಎದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿ ಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಅವರು ಕಣಕ್ಕೆ ಇಳಿಯಲಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಚಾಂಪಿ ಯನ್‌ಷಿಪ್‌ನ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಅಡ್ವಾನಿ ಆ ಮೂಲಕ ಹೊಸ ಋತುವಿಗೆ ಶುಭ ನಾಂದಿ ಹಾಡಿದ್ದರು. ನಂತರ ಪ್ರಶಸ್ತಿಗಳನ್ನು ಬಾಚುತ್ತ ಸಾಗಿದ್ದರು.

ADVERTISEMENT

ಏಪ್ರಿಲ್‌ನಲ್ಲಿ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಆರನೇ ಬಾರಿ ಈ ಸಾಧನೆಯ ಮಾಡಿದ ಖ್ಯಾತಿ ಗಳಿಸಿದರು. ಏಷ್ಯನ್‌ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ರನ್‌ರ್‌ ಅಪ್‌ ಆಗಿದ್ದರು. ಜುಲೈನಲ್ಲಿ ಮಲ್ಕೀತ್‌ ಸಿಂಗ್ ಮತ್ತು ಲಕ್ಷ್ಮಣನ್ ಜೊತೆಗೂಡಿ ತಂಡ ಚಾಂಪಿಯನ್‌ಷಿಪ್ ಗೆದ್ದಿದ್ದರು. ನಂತರ ಐಬಿಎಸ್ಎಫ್‌ ವಿಶ್ವ ಬಿಲಿಯರ್ಡ್ಸ್‌ (ಪಾಯಿಂಟ್ ಮಾದರಿ) ಮತ್ತು ಸ್ನೂಕರ್ ಪ್ರಶಸ್ತಿ ಗೆದ್ದರು.

ಸೌರವ್‌ ಕೊಠಾರಿ, ರೂಪೇಶ್‌ ಷಾ, ಧ್ರುವ ಸಿತ್ವಾಲ ಮತ್ತು ಅಲೋಕ್ ಕುಮಾರ್‌ ಕೂಡ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.