ADVERTISEMENT

ಮುನ್ನಡೆಯಲ್ಲಿ ಸಾಗರಸಿಂಗ್‌

ಶೂಟಿಂಗ್‌: ಏರ್‌ ಪಿಸ್ತೂಲ್‌ ವಿಭಾಗದಲ್ಲಿ 150 ಸ್ಪರ್ಧಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಮುನ್ನಡೆಯಲ್ಲಿ ಸಾಗರಸಿಂಗ್‌
ಮುನ್ನಡೆಯಲ್ಲಿ ಸಾಗರಸಿಂಗ್‌   

ಹುಬ್ಬಳ್ಳಿ: ಕರ್ನಾಟಕದ ಸಾಗರಸಿಂಗ್ ಬೇಡಿ ಅವರು ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಮುಕ್ತ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀಟರ್ ಏರ್‌ ಪಿಸ್ತೂಲ್‌ ವಿಭಾಗದ ಮೊದಲ ಐದು ಸುತ್ತುಗಳ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕ್ಲಬ್‌ನ ಶೂಟಿಂಗ್‌ ರೇಂಜ್‌ನಲ್ಲಿ ಭಾನುವಾರ ಆರಂಭವಾದ ಸ್ಪರ್ಧೆಯಲ್ಲಿ ಒಟ್ಟು 150 ಶೂಟರ್‌ಗಳು ಭಾಗವಹಿಸಿದ್ದರು. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸಾಗರಸಿಂಗ್‌ ಒಟ್ಟು 400ಕ್ಕೆ 381 ಪಾಯಿಂಟ್ಸ್ ಗಳಿಸಿ ಮೊದಲಿಗರಾದರು.

ಮಹಾರಾಷ್ಟ್ರದ ಎಂ. ಅಕ್ಷಯ ಕುಮಾರ್‌  380 ಪಾಯಿಂಟ್ಸ್‌ ಕಲೆ ಹಾಕಿ 2ನೇ ಸ್ಥಾನದಲ್ಲಿದ್ದಾರೆ. ಉತ್ತರ ಪ್ರದೇಶದ ಸೌರಭ್‌ ಚೌಧರಿ 379 ಪಾಯಿಂಟ್ಸ್‌ನಿಂದ ಮೂರನೇ ಸ್ಥಾನ ಹೊಂದಿದ್ದಾರೆ.

ADVERTISEMENT

ಈ ಮೂವರೂ ಶೂಟರ್‌ಗಳು ಒಂದು ಪಾಯಿಂಟ್‌ ಅಂತರವಷ್ಟೇ ಹೊಂದಿರುವುದರಿಂದ ಉಳಿದ 11 ಸುತ್ತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿವೆ.

ಮಹಾರಾಷ್ಟದ ನಂದಕಿಶೋರ ರಾಹುಲ್‌ 372 ಮತ್ತು ಮೈಸೂರಿನ ರಕ್ಷಿತ್‌ ಶಾಸ್ತ್ರಿ 370 ಪಾಯಿಂಟ್ಸ್ ಹೊಂದಿದ್ದು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಮದ್ರಾಸ್‌ ರೆಜಿಮೆಂಟ್‌ನ ಕೆ.ಎಂ. ರಂಜಿತ್‌ (369 ಪಾಂ.), ಮಹಾರಾಷ್ಟ್ರದ ಬಿ. ತೇಜಸ್‌ (367 ಪಾಂ.) ಮತ್ತು ಕರ್ನಾಟಕದ ದಿವ್ಯಾ ಕೆ.ಎಸ್‌. (367 ಪಾಂ.) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಒಟ್ಟು ಎಂಟು ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಒಲಿಂಪಿಯನ್‌ ಪಿ.ಎನ್‌.ಪ್ರಕಾಶ್‌ ಅವರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು ಸೋಮವಾರ ಕಣಕ್ಕಿಳಿಯಲಿದ್ದಾರೆ. ಜ.30ರಂದು ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.